ಅಲ್ಟಿಮೇಟ್ ಪವರ್; ಬಿಎಂಡಬ್ಲ್ಯು ಎಂ5 ಭಾರತದಲ್ಲಿ ಬಿಡುಗಡೆ
ಬಿಎಂಡಬ್ಲ್ಯು ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿರುವ ಎಂ5 ಸೆಡಾನ್ ಕಾರನ್ನು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಕಂಪ್ಲೀಟ್ ಬಿಲ್ಟ್ ಅಪ್ ಯುನಿಟ್ (ಸಿಬಿಯು) ಮುಖಾಂತರ ಬಿಎಂಡಬ್ಲ್ಯು ಭಾರತವನ್ನು ಪ್ರವೇಶಿಸಲಿದ್ದು, ಸಂಸ್ಥೆಯ ದೇಶದೆಲ್ಲ ಅಧಿಕೃತ ವಿತರಕ ಜಾಲದಲ್ಲಿ ದೊರಕಲಿದೆ.

ಗುರ್ಗಾಂವ್‌ನಲ್ಲಿ ಬಿಎಂಡಬ್ಲ್ಯು ಎಂ5 ಬಿಡುಗಡೆ ವೇಳೆ ಪ್ರತಿಕ್ರಿಯಿಸಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ಪಿಲಿಪ್ ವೊನ್ ಸಾಹ್ರ್, ಪವರ್ ವಿತರಣೆ, ಟಾರ್ಕ್ ಮತ್ತು ಡ್ರೈವಿಂಗ್ ಡೈನಾಮಿಕ್ಸ್‌ನಲ್ಲಿ ಪರಿಪೂರ್ಣ ಅಥ್ಲೇಟಿಕ್ಸ್ ಕಾರೆನಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ನಿಯಮಗಳು ಇದಕ್ಕೆ ಬಾಧಕವಾಗುವುದಿಲ್ಲ. ಇದು ಎಂ ತತ್ವಶಾಸ್ತ್ರಕ್ಕೆ ನಿಷ್ಠಾವಂತವಾಗಿದ್ದು, ಗರಿಷ್ಠ ನಿರ್ವಹಣೆಯನ್ನು ಹೊಂದಿರುತ್ತದೆ ಎಂದಿದ್ದಾರೆ.
ನಾವೀನ್ಯ ತಂತ್ರಗಾರಿಕೆಯೊಂದಿಗೆ ಆಗಮನವಾಗಿರುವ ಬಿಎಂಡಬ್ಲ್ಯು ಎಂ5 ಪೆಟ್ರೋಲ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿದ್ದು, ಆಲ್ ಇಂಡಿಯಾ ಎಕ್ಸ್ ಶೋ ರೂಂ ಬೆಲೆ 1.35 ಕೋಟಿ ರು.ಗಳಾಗಿದೆ.

ಅಂದ ಹಾಗೆ ಬಿಎಂಡಬ್ಲ್ಯು ಎಂ5, ಎಂ ಟ್ವಿನ್ ಪವರ್ ಟರ್ಬೊ ಎಂಟು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 560 ಅಶ್ವಶಕ್ತಿ (680 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ನೂತನ ಎಂ5 4.3 ಸೆಕಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸೆವೆನ್ ಸ್ಪೀಡ್ ಎಂ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಜೊತೆ ಕ್ರೂಸ್ ಕಂಟ್ರೋಲ್ ಉತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ. ಇದು ಗರಿಷ್ಠ ನಿರ್ವಹಣಾ ಸೆಡಾನ್ ಕಾರುಗಳಲ್ಲ ಮರ್ಸಿಡಿಸ್ ಬೆಂಝ್ ಇ63 ಎಎಂಜಿ ಮಾದರಿಯ ಸವಾಲನ್ನು ಎದುರಿಸಲಾಗಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜೊತೆ ಬ್ರೇಕ್ ಅಸಿಸ್ಟ್, ಆಕ್ಟಿವ್ ಪ್ರೊಟೆಕ್ಷನ್ ಜೊತೆ ಆಕ್ಟಿವ್‌ನೆಸ್ ಅಸಿಸ್ಟಂಟ್ ಮತ್ತು ಆಕ್ಟಿವ್ ಹೆಡ್ ರೆಸ್ಟ್ (ಫ್ರಂಟ್) ಪಡೆಯಲಿದೆ.
ಹಾಗೆಯೇ ಇಂಟೆಲಿಜೆಂಟ್ ಲೈಟ್ ವೇಟ್ ನಿರ್ಮಾಣ, ಆಟೋಮ್ಯಾಟಿಕ್ ಸ್ಟಾರ್ಟ್/ಸ್ಟಾಪ್ ಕ್ರಿಯೆ, ಬ್ರೇಕ್ ಎನರ್ಜಿ ರಿಜನರೇಷನ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, 50:50 ಭಾರ ವಿತರಣೆ ಮತ್ತು ಇನ್ನಿತರ ಗರಿಷ್ಠ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ನೆಕ್ಸ್ಟ್ ಜನರೇಷನ್ ಬಿಎಂಡಬ್ಲ್ಯು ಐಡ್ರೈವ್ (ಆನ್ ಬೋರ್ಡ್ ಡ್ರೈವ್ ಮಾಹಿತಿ ಸಿಸ್ಟಂ), ಟಚ್ ಕಂಟ್ರೋಲರ್, ಕೈ ಬರಹ ಗುರುತಿಸುವಿಕೆ, ಬಿಎಂಡಬ್ಲ್ಯು ನೇವಿಗೇಷನ್ ಪ್ರೊಫೆಷನಲ್ (ಇಂಟೆಗ್ರೇಟಡ್ ಗ್ಲೋಬಲ್ ಪೊಸಿಷನ್ ಸಿಸ್ಟಂ-ಜಿಪಿಎಸ್), 25.9 ಕಲರ್ ಡಿಸ್‌ಪ್ಲೇ, 3 ಮ್ಯಾಪ್, ಸಂಪೂರ್ಣ ಕಲರ್ ಬಿಎಂಡಬ್ಲ್ಯು ಹೆಡ್ ಅಪ್ ಡಿಸ್‌ಪ್ಲೇ, ಎಂ ನಿರ್ದಿಷ್ಟ ವೀಕ್ಷಣೆ, ಬ್ಲೂಟೂತ್, ಯುಎಸ್‌ಬಿ ಕನೆಕ್ಟಿವಿಟಿ, ಹರ್ಮಾನ್ ಕರ್ಡಾನ್ ಸೌರಂಡ್ ಸೌಂಡ್ ಸಿಸ್ಟಂ, ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್ ಮತ್ತು ರಿಯರ್ ವ್ಯೂ ಕ್ಯಾಮೆರಾ ಸ್ಟಾಂಡರ್ಡ್ ಆಗಿ ದೊರಕಲಿದೆ.
ಕಾರ್ ಕೇರ್ ಸೆಟ್ - ಶೇ.10ರಷ್ಟು ರಿಯಾಯಿತಿ - ತ್ವರೆ ಮಾಡಿ


Click it and Unblock the Notifications








