ಬಿಎಂಡಬ್ಲ್ಯು 40,000ನೇ ಕಾರು ಭಾರತದಲ್ಲೇ ನಿರ್ಮಾಣ
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ತನ್ನ 40,000ನೇ ಕಾರನ್ನು ಭಾರತದಲ್ಲೇ ಸ್ಥಳೀಯವಾಗಿ ಉತ್ಪಾದಿಸುವ ಯೋಜನೆ ಹೊಂದಿದೆ.
ಕಳೆದ ಅನೇಕ ವರ್ಷಗಳಿಂದ ದೇಶದಲ್ಲಿ ತನ್ನ ಸ್ಥಾನ ಭದ್ರಪಡಿಸಿರುವ ಬಿಎಂಡಬ್ಲ್ಯು ಮುಂಬರುವ ನವೆಂಬರ್ 26ರಂದು ಎರಡು ಎಂ ಶ್ರೇಣಿಯ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಇದೀಗ ಸಂಸ್ಥೆಯ 40,000ನೇ ಕಾರು ದೇಶದಲ್ಲಿರುವ ಚೆನ್ನೈ ಘಟಕದಿಂದಲೇ ಹೊರಬರಲಿದೆ ಎಂಬುದನ್ನು ಖಚಿತಪಡಿಸಿದೆ. ಈ ಮೈಲಿಗಲ್ಲಿನ ಗಾಡಿ 5 ಸಿರೀಸ್ ಆಗಿರಲಿದ್ದು, ಅತ್ಯಾಕರ್ಷಕ ಮೈ ಬಣ್ಣವನ್ನು ಪಡೆದುಕೊಳ್ಳಲಿದೆ.
ನಿರಂತರ ಅಂತರಾಳದಲ್ಲಿ ದೇಶದ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹೊಸ ಮಾದರಿಗಳನ್ನು ಪರಿಚಯಿಸುತ್ತಲೇ ಬಂದಿರುವ ಬಿಎಂಡಬ್ಲ್ಯು ಈ ಮೈಲಿಗಲ್ಲಿನ ಕ್ಷಣವನ್ನು ಆಚರಿಸಿಕೊಳ್ಳುವುದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವೇಳೆ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರೂ ಹಾಜರಿರಲಿದ್ದಾರೆ.


Click it and Unblock the Notifications