ದುಬಾರಿಯಾಗಲಿದೆ ಬಿಎಂಡಬ್ಲ್ಯು, ಮಿನಿ ಕಾರುಗಳು

By Nagaraja

ಜರ್ಮನಿಯ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾವು ತನ್ನೆಲ್ಲ ಮಾದರಿಗಳಿಗೆ ಶೇಕಡಾ 5ರಷ್ಟು ಬೆಲೆ ಏರಿಕೆ ಘೋಷಿಸಿದೆ. ಇದರೊಂದಿಗೆ ಬಿಎಂಡಬ್ಲ್ಯು ಸಂಸ್ಥೆಯ ಅಧೀನತೆಯಲ್ಲಿರುವ ಮಿನಿ ಉತ್ಪನ್ನಗಳಿಗೂ ದರ ಏರಿಕೆಯಾಗಲಿದ್ದು, 2015 ಜನವರಿ 1ರಂದು ಹೊಸ ದರ ಅನ್ವಯವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾಗಿರುವ ಪಿಲಿಪ್ ವಾನ್ ಸಾಹ್ರ್, "ಭಾರತ ಮಾರುಕಟ್ಟೆಯಲ್ಲಿ ಸಮರ್ಥನೀಯ ನಾಯಕತ್ವ ಕಾಯ್ದುಕೊಳ್ಳುವುದು ನಮ್ಮ ಇರಾದೆಯಾಗಿದೆ. ಇದೀಗ ಬೆಲೆ ಏರಿಕೆಗೊಳಿಸಿದರೂ ದೇಶದಲ್ಲಿನ ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ಸಂಸ್ಥೆಯು ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ" ಎಂದಿದ್ದಾರೆ.

bmw

ಬಿಎಂಡಬ್ಲ್ಯು 1 ಸಿರೀಸ್, 3 ಸಿರೀಸ್, ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ, ಬಿಎಂಡಬ್ಲ್ಯು 5 ಸಿರೀಸ್, ಬಿಎಂಡಬ್ಲ್ಯು 7 ಸಿರೀಸ್, ಬಿಎಂಡಬ್ಲ್ಯು ಎಕ್ಸ್1, ಬಿಎಂಡಬ್ಲ್ಯು ಎಕ್ಸ್3, ಬಿಎಂಡಬ್ಲ್ಯು ಎಕ್ಸ್5ಗಳಂತಹ ಮಾದರಿಗಳನ್ನು ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ದೇಶದಲ್ಲಿ ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ, ಬಿಎಂಡಬ್ಲ್ಯು ಆಕ್ಟಿವ್ ಹೈಬ್ರಿಡ್ 7, ಬಿಎಂಡಬ್ಲ್ಯು ಎಕ್ಸ್6, ಬಿಎಂಡಬ್ಲ್ಯು ಝಡ್4, ಬಿಎಂಡಬ್ಲ್ಯು ಎಂ3 ಸೆಡಾನ್, ಬಿಎಂಡಬ್ಲ್ಯು ಎಂ4 ಕೂಪೆ, ಬಿಎಂಡಬ್ಲ್ಯು ಎಂ5 ಸೆಡಾನ್, ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಮಾದರಿಗಳು ಸಹ ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಮಾರಾಟವಾಗುತ್ತಿದೆ.
mini

ನಿಮ್ಮ ಮಾಹಿತಿಗಾಗಿ, ಜರ್ಮನಿಯ ಈ ಲಗ್ಷುರಿ ಸಂಸ್ಥೆಯು 2015ನೇ ಸಾಲಿನಲ್ಲಿ ಬಿಎಂಡಬ್ಲ್ಯು ಐ8 ಮಾದರಿಯನ್ನು ಪರಿಚಯಿಸಲಿದೆ. ಪ್ರಸ್ತುತ ಸಂಸ್ಥೆಯು ದೇಶದಲ್ಲಿ 37 ಸೇಲ್ಸ್ ಔಟ್ಲೆಟ್‌ಗಳನ್ನು ಹೊಂದಿದೆ. ಇದು ದೆಹಲಿ, ನೋಯ್ಡಾ, ಗುರ್ಗಾಂವ್, ನೋಯ್ಡಾ, ಫರಿದಾಬಾದ್, ಮುಂಬೈ, ಬೆಂಗಳೂರು, ಮಂಗಳೂರು, ಇಂಧೋರ್, ಚಂಡೀಗಡ, ಲೂಧಿಯಾನ, ಹೈದರಾಬಾದ್, ಚೆನ್ನೈ, ಕೊಯಂಬತ್ತೂರು, ಪುಣೆ, ಗೋವಾ, ಕೋಲ್ಕತ್ತಾ, ಭುವನೇಶ್ವರ, ಅಹಮದಾಬಾದ್, ಸೂರತ್, ಕೊಚ್ಚಿ, ಕಲ್ಲಿಕೋಟೆ, ಜೈಪುರ, ಉದಯ್‌ಪುರ, ನಾಗ್ಫುರ, ಲಕ್ನೋ ಮತ್ತು ಕಾನ್ಪುರ ನಗರಗಳಲ್ಲಿ ಸ್ಥಿತಗೊಂಡಿದೆ.

ಇದೀಗ ದೇಶದಲ್ಲಿ ಮಾರಾಟವಾಗುತ್ತಿರುವ ಇತರ ಐಷಾರಾಮಿ ಕಾರುಗಳು ಸಹ ಬಿಎಂಡಬ್ಲ್ಯು ಅದೇ ನೀತಿಯನ್ನು ಅನುಸರಿಸುವ ಸಾಧ್ಯತೆಯಿದೆ.

More from DriveSpark

Article Published On: Friday, December 12, 2014, 15:38 [IST]
English summary
BMW Group India has announced a price increase of up to 5 percent across the BMW and MINI product range, effective 1 January, 2015.
Read in English: BMW To Hike Prices In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+