ಬಿಎಂಡಬ್ಲ್ಯು, ಟೊಯೊಟಾದಿಂದ ಜಂಟಿಯಾಗಿ ಹೈಬ್ರಿಡ್ ಸೂಪರ್ ಕಾರು
ಭವಿಷ್ಯದ ಗರಿಷ್ಠ ನಿರ್ವಹಣೆಯ ಕಾರುಗಳೆಲ್ಲವೂ ಹೈಬ್ರಿಡ್ ಟಚ್ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಇಂತಹದೊಂದು ಪ್ರವೃತ್ತಿ ಈಗಾಗಲೇ ಆರಂಭಗೊಂಡಿದೆ ಅಂದರೆ ತಪ್ಪಾಗಲಾರದು. ಮೈಕ್‌ಲ್ಯಾರೆನ್ ಪಿ1, ಫೆರಾರಿ ಲಾಫೆರಾರಿ ಹಾಗೂ ಪೋರ್ಷೆ 918 ಸ್ಪೈಡರ್ ಹೈಪರ್ ಕಾರುಗಳು ಇದರ ಭಾಗವಾಗಿದೆ.
ಇದೀಗ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಜಪಾನ್‌ನ ದೈತ್ಯ ವಾಹನ ಸಂಸ್ಥೆಯಾಗಿರುವ ಟೊಯೊಟಾ ಜಂಟಿಯಾಗಿ ಮುಂದಿನ ಜನಾಂಗದ ವಿದ್ಯುತ್ ಚಾಲಿತ ಸ್ಪೋರ್ಟ್ಸ್ ಕಾರುಗಳನ್ನು ಅಭಿವೃದ್ಧಿಪಡಿಸಲಿದೆ.
ಇದರಲ್ಲಿ ಎರಡು ವರ್ಷನ್‌ಗಳು ಒಳಗೊಂಡಿರಲಿದೆ. ಗರಿಷ್ಠ ನಿರ್ವಹಣೆಯ ಬಿಎಡಬ್ಲ್ಯು ಝಡ್4 ಹಾಗೂ ಟೊಯೊಟಾ ಸುಪ್ರಾ ಉತ್ತರಾಧಿಕಾಗಿರುವ ಎಫ್‌ಟಿ-1 ಕಾನ್ಸೆಪ್ಟ್ ಒಳಗೊಂಡಿರಲಿದೆ. ಬಿಎಂಡಬ್ಲ್ಯು ಹಾಗೂ ಟೊಯೊಟಾ ತಮ್ಮ ತಂತ್ರಜ್ಞಾನಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಹೈಬ್ರಿಡ್ ಸೂಪರ್ ಕಾರನ್ನು ಅಭಿವೃದ್ಧಿಪಡಿಸಲಿದೆ.



Click it and Unblock the Notifications








