ಸಾಮಾನ್ಯ ಬಿಎಂಡಬ್ಲ್ಯು ಕಾರುಗಳಲ್ಲೂ ಕಾರ್ಬನ್ ಫೈಬರ್ ಬಳಕೆ

Written By:

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು, ಕ್ರಿಕೆಟ್‌ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಅನಾವರಣಗೊಳಿಸಿದರು.

ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಐ8 ಹಾಗೂ ಐ3 ಮಾದರಿಗಳು ಪರಿಸರ ಸ್ನೇಹಿಯಾಗಿದೆ. ಇದರ ಭಾರ ಕಡಿತಗೊಳಿಸುವ ನಿಟ್ಟಿನಲ್ಲಿ ಕಾರ್ಬನ್ ಫೈಬರ್ ಹಾಗೂ ಬಲವರ್ಧಿತ ಪ್ಲಾಸ್ಟಿಕ್ ಸಾಧನಗಳನ್ನು ಬಳಕೆ ಮಾಡಲಾಗಿತ್ತು.

BMW

ಸಾಮಾನ್ಯವಾಗಿ ಬಿಎಂಡಬ್ಲ್ಯು ಮೋಟಾರುಸ್ಪೋರ್ಟ್ಸ್ ವಿಭಾಗವು ರೇಸ್ ಕಾರಿನ ಭಾರ ಕಡಿತಗೊಳಿಸುವ ನಿಟ್ಟಿನಲ್ಲಿ ಇಂತಹ ವಸ್ತುಗಳನ್ನು ಬಳಕೆ ಮಾಡುತ್ತವೆ. ಅಲ್ಲದೆ ಇದರಿಂದ ಮೇಲ್ಛಾವಣಿ ಭಾರ ಕಡಿತಗೊಳ್ಳುವುದಲ್ಲದೆ, ಕೇಂದ್ರ ಭಾಗದ ಗುರುತ್ವವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಪ್ರಸ್ತುತ ಬಂದಿರುವ ವರದಿಗಳ ಪ್ರಕಾರ ಐ8, ಐ3 ಹೊರತಾದ ಸಾಮಾನ್ಯ ಬಿಎಂಡಬ್ಲ್ಯು ಆವೃತ್ತಿಗಳಲ್ಲೂ ಕಾರ್ಬನ್ ಫೈಬರ್ ಹಾಗೂ ಬಲವರ್ಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಲು ಜರ್ಮನಿ ಮೂಲದ ಈ ವಾಹನ ತಯಾರಕ ಸಂಸ್ಥೆ ನಿರ್ಧರಿಸಿದೆ. ಈ ಸೌಲಭ್ಯವನ್ನು ಬಿಎಂಡಬ್ಲ್ಯು 7 ಸಿರೀಸ್ ಪಡೆದುಕೊಳ್ಳಲಿದೆ. ಇದರಲ್ಲೂ ಹೈಬ್ರಿಡ್ ಮೋಟಾರು ಆಳವಡಿಕೆಯಾಗಲಿದೆಯೆಂಬ ಮಾಹಿತಿ ಲಭಿಸಿದೆ.

English summary
BMW showcased their i8 at the current Auto Expo in India. The i-series consist of i3 and i8, these are German made eco-friendly car. These cars are known to use carbon fibre-reinforced plastic to create a strong shell for their cars.
Story first published: Saturday, March 1, 2014, 14:34 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark