ಸ್ಫರ್ಧಾ ಕಾನೂನು ಉಲ್ಲಂಘನೆ; 14 ಕಂಪನಿಗಳಿಗೆ 2544 ಕೋಟಿ ರು. ದಂಡ

Written By:

ಸ್ಪರ್ಧಾ ಕಾನೂನು (competition law) ಉಲ್ಲಂಘನೆಯ ಹಿನ್ನಲೆಯಲ್ಲಿ ದೇಶದ 14 ಕಾರು ತಯಾರಕ ಸಂಸ್ಥೆಗಳ ಮೇಲೆ ಒಟ್ಟು 2,544.65 ಕೋಟಿ ರುಪಾಯಿಗಳ ಭಾರಿ ದಂಡವನ್ನು ಭಾರತೀಯ ಸ್ಪರ್ಧಾ ಆಯೋಗವು (Competition Commission Of India) ವಿಧಿಸಿದೆ.

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಆಯೋಗವು ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಾದ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಹಾಗೂ ಮಹೀಂದ್ರಗಳಂತಹ ಸಂಸ್ಥೆಗಳಿಂದ ಸ್ಪರ್ಧಾ ಕಾನೂನು ಉಲ್ಲಂಘನೆಯಾಗಿದೆ ಎಂದಿದೆ.

Competition Commission Of India

ಈ ಪೈಕಿ ಟಾಟಾ ಸಂಸ್ಥೆಯ ಮೇಲೆ ಅತಿ ಹೆಚ್ಚು ದಂಡ ವಿಧಿಸಲಾಗಿದ್ದು, 1,346.46 ಕೋಟಿ ರು. ದಂಡ ತೆರಬೇಕಾಗಿದೆ. ಉಳಿದಂತೆ ಮಾರುತಿ ಸುಜುಕಿ 471.14 ಕೋಟಿ ರು., ಮಹೀಂದ್ರ 292.25 ಕೋಟಿ ರು. ಮತ್ತು ಜನರಲ್ ಮೋಟಾರ್ಸ್ ಮೇಲೆ 84.58 ಕೋಟಿ ರು. ದಂಡ ಹೇರಲಾಗಿದೆ. ಮೇಲೆ ತಿಳಿಸಲಾದ ಸಂಸ್ಥೆಗಳನ್ನು ಹೊರತುಪಡಿಸಿ ಹೋಂಡಾ, ಫೋಕ್ಸ್‌ವ್ಯಾಗನ್, ಫಿಯೆಟ್, ಬಿಎಂಡಬ್ಲ್ಯು, ಫೋರ್ಡ್, ಹಿಂದೂಸ್ತಾನ್ ಮೋಟಾರ್ಸ್, ಮರ್ಸಿಡಿಸ್ ಬೆಂಝ್, ನಿಸ್ಸಾನ್ ಮೋಟಾರ್, ಸ್ಕೋಡಾ ಮತ್ತು ಟೊಯೊಟಾ ಕಿರ್ಲೊಸ್ಕರ್‌ಗಳಂತಹ ಕಾರು ಸಂಸ್ಥೆಗಳ ಮೇಲೂ ದಂಡ ವಿಧಿಸಲಾಗಿದೆ.

ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿರುವ ಸಿಸಿಐ, ವಾಹನಗಳ ಬಿಡಿಭಾಗ ಸುಲಭವಾಗಿ ಲಭ್ಯತೆಗೆ ಸಂಬಂಧಿಸಿದಂತೆ ವಾಹನ ತಯಾರಕ ಸಂಸ್ಥೆಗಳು ಪರಿಣಾಮಕಾರಿ ಯೋಜನೆ ಜಾರಿಗೊಳಿಸಬೇಕಾಗಿದೆ ಎಂದಿದೆ. ಬಿಡಿಭಾಗಗಳ ದರ ಹಾಗೂ ಇತರ ಮಾಹಿತಿಗಳ ಕುರಿತಾಗಿಯೂ ಬಳಕೆದಾರರಿಗೆ ಮಾಹಿತಿ ಮುಟ್ಟಿಸುವುದು ಅಗತ್ಯವಾಗಿದೆ. ಇದರ ಜೊತೆಗೆ ನಿರ್ವಹಣೆ, ವಾರಂಟಿ ನಿಯಮ ಮತ್ತು ಇತರ ಬದಲಿ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಒದಗಿಸಬೇಕಾಗಿದೆ.

ಏನಿದು ಭಾರತೀಯ ಸ್ಪರ್ಧಾ ಆಯೋಗ?

2002ರ ಸ್ಪರ್ಧಾ ಕಾಯ್ದೆ ಜಾರಿಗೊಳಿಸಲು ಬದ್ಧವಾಗಿರುವ ಭಾರತೀಯ ಸರಕಾರದ ಭಾಗವಾಗಿರುವ ಭಾರತೀಯ ಸ್ಪರ್ಧಾ ಆಯೋಗವು 2003 ಅಕ್ಟೋಬರ್ 14ರಂದು ಅಸ್ಥಿತ್ವಕ್ಕೆ ಬಂದಿತ್ತು. ಇದರ ಪ್ರಥಮ ಕರ್ತವ್ಯ ಏನೆಂದರೆ ದೇಶದೆಲ್ಲಡೆ ಬಳಕೆದಾರರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಿಗಾ ವಹಿಸುವುದಾಗಿದೆ. ಇದು 2009ನೇ ಇಸವಿಯಲ್ಲಿ ಸಂಪೂರ್ಣ ಕಾರ್ಯಕ್ಷಮತೆಗೆ ಬಂದಿತ್ತು.

ಹೆಚ್ಚಿನ ಮಾಹಿತಿಗಾಗಿ ವಿಕಿಪೀಡಿಯಾ ಕ್ಲಿಕ್ಕಿಸಿ

ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ವೆಬ್‌ಸೈಟ್ ಲಿಂಕ್ ಇಲ್ಲಿದೆ

Read in English: Car Makers Fined
English summary
The Competition Commission Of India (CCI) has fined 14 car manufacturers a hefty fine of INR 2,544.65 crore for violating the competition law.
Please Wait while comments are loading...

Latest Photos