ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ರಸ್ತೆಗಳಿಗೆ ನಿರಂತರ ಸಂಪರ್ಕ ಇರುವುದರಿಂದ ಚಕ್ರಗಳು ಪಂಚರ್ ಆಗುವ ಪ್ರಸಂಗ ಪದೇ ಪದೇ ಎದುರಾಗಬಹುದು. ಇದನ್ನು ತಪ್ಪಿಸಲು ನಿರಂತರ ಅಂತರಾಳದಲ್ಲಿ ಅಧಿಕೃತ ಸರ್ವೀಸ್ ಸೆಂಟರ್ ಗೆ ತೆರಳಿ ಪರೀಶೀಲನೆ ನಡೆಸಿ ನಿಮ್ಮ ಕಾರಿನ ಚಕ್ರಗಳ ಬಾಳ್ವಿಕೆಯನ್ನು ಪರೀ

By Manoj B.k

ರಸ್ತೆಗಳಿಗೆ ನಿರಂತರ ಸಂಪರ್ಕ ಇರುವುದರಿಂದ ಚಕ್ರಗಳು ಪಂಚರ್ ಆಗುವ ಪ್ರಸಂಗ ಪದೇ ಪದೇ ಎದುರಾಗಬಹುದು. ಇದನ್ನು ತಪ್ಪಿಸಲು ನಿರಂತರ ಅಂತರಾಳದಲ್ಲಿ ಅಧಿಕೃತ ಸರ್ವೀಸ್ ಸೆಂಟರ್ ಗೆ ತೆರಳಿ ಪರೀಶೀಲನೆ ನಡೆಸಿ ನಿಮ್ಮ ಕಾರಿನ ಚಕ್ರಗಳ ಬಾಳ್ವಿಕೆಯನ್ನು ಪರೀಶೀಲಿಸಬಹುದಾಗಿದೆ.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಚಕ್ರಗಳು ಪಂಚರ್ ಆದಾಗ ಮೊದಲು ಮಾಡಬೇಕಾದ ಅಗತ್ಯ ಕ್ರಮ ಏನೆಂದರೆ ಆದಷ್ಟು ಬೇಗನೇ ಕಾರನ್ನು ರಸ್ತೆಯ ಬದಿಗೆ ಸರಿಸುವ ಪ್ರಯತ್ನ ಮಾಡಬೇಕು. ಫ್ಲ್ಯಾಟ್ ಚಕ್ರದಲ್ಲೂ ಸ್ವಲ್ಪ ದೂರದ ವರೆಗೆ ಸಾಗುವುದರಿಂದ ನಿಯಂತ್ರಣ ಕಳೆದುಕೊಳ್ಳದಂತೆ ನೋಡಿಕೊಂಡು ನಿಧಾನವಾಗಿ ವಾಹನವನ್ನು ಬದಿಗೆ ಸರಿಸಬೇಕು.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಇದು ಸಾಧ್ಯವಾಗದಿದ್ದಲ್ಲಿ ತಕ್ಷಣವೇ ಹಜಾರ್ಡ್ ಲೈಟ್ ಆನ್ ಮಾಡಿಟ್ಟುಕೊಳ್ಳಿ. ಅಲ್ಲದೆ ತಕ್ಷಣವೇ ಕಾರಿಂದ ಹೊರಬರುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಹೆದ್ದಾರಿಯಲ್ಲಿ ಹಿಂಬದಿಯಿಂದ ಶರವೇಗದಲ್ಲಿ ವಾಹನಗಳು ಬರುವುದರಿಂದ ಅಪಾಯವನ್ನು ಆಹ್ವಾನಿಸಲಿದೆ.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಕಾರನ್ನು ಬದಿಗೆ ಸರಿಸಿ ಎಮರ್ಜನ್ಸಿ ಬ್ರೇಕ್ ಹಾಕಿದ ಬಳಿಕ ಮಗದೊಮ್ಮೆ ಹಜಾರ್ಡ್ ಬೆಳಕಿನ ನೆರವನ್ನು ಪಡೆಯಿರಿ. ಯಾವುದೇ ಕಾರಣಕ್ಕೆ ತಿರುವುಗಳಲ್ಲಿ ಕಾರು ನಿಲ್ಲಿಸುವ ಗೋಜಿಗೆ ಹೋಗಬೇಡಿರಿ.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಹಜಾರ್ಡ್ ಲೈಟ್ ಆನ್ ಮಾಡಿಟ್ಟ ಮಾತ್ರಕ್ಕೆ ಅಪಾಯದ ಬಗ್ಗೆ ಸೂಚನೆ ನೀಡಿದಂತಾಗುವುದಿಲ್ಲ. ಈ ನಿಟ್ಟಿನಲ್ಲಿ ಬದಿಗೆ ಸರಿಸಿದ ಬಳಿಕ ಸ್ವಲ್ಪ ಅಂತರದಷ್ಟು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫಲಕ ಅಥವಾ ಕಲ್ಲುಗಳನ್ನಿಡುವ ಮೂಲಕ ಎದುರು ಬದುರಾಗಿ ಬರುವ ವಾಹನಗಳಿಗೆ ಆತಂಕದ ಸೂಚನೆ ನೀಡಬಹುದು.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಇಲ್ಲಿ ವಿವೇಚನಾ ಬುದ್ಧಿ ಹೆಚ್ಚು ಉಪಯೋಗಿಸಬೇಕಾಗಿದ್ದು, ಮುಂಭಾಗ ಅಥವಾ ಹಿಂಭಾಗದಿಂದ ಬರುವ ವಾಹನಗಳಿಗೆ ಕಾಣುವಂತಹ ರೀತಿಯಲ್ಲಿ ರಸ್ತೆ ಬದಿಯಲ್ಲಿ ವಾಹನವನ್ನು ಪಾರ್ಕ್ ಮಾಡಿಟ್ಟುಕೊಳ್ಳಿರಿ.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ರಾತ್ರಿ ವೇಳೆಯಲ್ಲಿ ಪಂಚರ್ ತೊಂದರೆ ಎದುರಾದ್ದಲ್ಲಿ ಮಗದೊಮ್ಮೆ ಹಜಾರ್ಡ್ ಲೈಟ್ ಆನ್ ಮಾಡಿಡಲು ಮರೆಯದಿರಿ. ಬಳಿಕ ಕಾರಿನ ಇಂಟಿರಿಯರ್ ಲೈಟ್ ಆನ್ ಮಾಡಿಟ್ಟುಕೊಳ್ಳಿ. ಆದರೆ ಕಾರಿನಿಂದ ಹೊರಬರುವ ಸಾಹಸಕ್ಕೆ ಮುಂದಾಗಬಾರದು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಬಳಿಕ ಕಾರಿನಲ್ಲಿದ್ದುಕೊಂಡೇ ಕೆಂಪು ಅಥವಾ ಬಿಳಿ ಬಟ್ಟೆಯ ಸಹಾಯದಿಂದ ಹೊರಗಡೆ ಬೀಸುತ್ತಿರಿ. ಇದು ಹಿಂಬದಿಯಿಂದ ಬರುವ ವಾಹನಗಳು ನಿಮ್ಮ ಅಪಾಯವನ್ನು ಅರಿತು ನೆರವಿಗೆ ಧಾವಿಸಲು ಸಹಕಾರಿಯಾಗಲಿದೆ.

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ಹಜಾರ್ಡ್ ಬೆಳಕಿನ ಬಳಿ ಸುರಕ್ಷಿತವಾಗಿ ನಿಲ್ಲುವ ಮೂಲಕವೂ ನೆರವನ್ನು ಯಾಚಿಸಬಹುದಾಗಿದೆ. ಇನ್ನು ರೋಡ್ ಸೈಡ್ ಅಸಿಸ್ಟನ್ಸ್ ಅಥವಾ ತುರ್ತು ಸೇವೆಗಾಗಿ ಪೊಲೀಸ್ ಗೂ ಕರೆ ಮಾಡಬಹುದಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ರಸ್ತೆ ಮಧ್ಯೆ ಟೈರ್ ಪಂಚರ್; ತುರ್ತಾಗಿ ಏನು ಮಾಡಬೇಕು?

ರಸ್ತೆ ಬದಿಗೆ ಮುಖ ಮಾಡಿಕೊಂಡು ನಿಂತುಕೊಂಡು ಯಾವುದೇ ರಿಪೇರಿ ಕೆಲಸಕ್ಕೆ ಮುಂದಾಗಬೇಡಿ. ಇದು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆತಡೆ ಮಾಡುವುದಲ್ಲದೆ ಅಪಾಯವನ್ನು ಆಹ್ವಾನಿಸಲಿದೆ.

Most Read Articles

Kannada
English summary
Things do while your car breaks down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X