ಕಾರಿಗಿಂತಲೂ ಸಿಗರೇಟ್ ತೆರಿಗೆಯೇ ಕಡಿಮೆ!
ಸಿಗರೇಟ್ ಸೇವನೆ 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಬಿತ್ತಿ ಪತ್ರ ಎಲ್ಲೆಡೆಗಳಲ್ಲಿಯೂ ಕಾಣಸಿಗಬಹುದಾಗಿದೆ. ಆದರೆ ಇನ್ನು ಮುಂದೆ ಕಾರು ಖರೀದಿ ನಿಮ್ಮ 'ಪಾಕೆಟ್‌ಗೆ ಹಾನಿಕಾರಕ' ಎಂಬ ಬೋರ್ಡ್ ಲಗತ್ತಿಸಬೇಕಾಗಿತು. ಯಾಕೆಂದರೆ ದೇಶದಲ್ಲಿ ಕಾರಿಗಿಂತಲೂ ಸಿಗರೇಟ್‌ಗೆ ಕಡಿಮೆ ತೆರಿಗೆ ವಿಧಿಸಲಾಗುತ್ತಿರುವುದು ವಿಷಾದನೀಯ ಸಂಗತಿ.
ಈ ವಿಚಾರವನ್ನು ಎತ್ತಿ ಹಿಡಿದವರು ಹೋಂಡಾ ಕಾರ್ಸ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ ಸೆನ್. ಅವರ ಪ್ರಕಾರ ಅಬಕಾರಿ ಶುಂಕ, ಸಿಎಸ್‌ಟಿ, ವಿಪತ್ತು ತೆರಿಗೆ, ವಿದ್ಯಾಭ್ಯಾಸ ತೆರಿಗೆ, ವ್ಯಾಟ್, ಹಾಗೂ ರಸ್ತೆ ತೆರಿಗೆಗಳಿಂದಾಗಿ ಕಾರು ಬೆಲೆ ಶೇಕಡಾ 50-70ರಷ್ಟು ಹೆಚ್ಚಳವಾಗುತ್ತಿದೆ ಎಂದಿದ್ದಾರೆ.

ದೇಶದಲ್ಲಿ ಕಾರು ಖರೀದಿ ತೆರಿಗೆಗಿಂತಲೂ ಧೂಮಪಾನ ತೆರಿಗೆ ಕಡಿಮೆಯಾಗಿದೆ. ಕಾರಿನ ಮಾದರಿಗೆ ಅನುಗುಣವಾಗಿ ಶೇಕಡಾ 50ರಿಂದ 70ರ ವರೆಗೆ ತೆರಿಗೆ ಪಾವತಿಸಬೇಕಾಗಿದೆ. ಉದಾಹರಣೆಗೆ ನಿರ್ಮಾಣ ಘಟಕದಲ್ಲಿ ರು. 100 ಆಗಿದ್ದರೆ ಅದು ಗ್ರಾಹಕರ ಖರೀದಿಗೆ ತಲುಪುವಾಗ ರು. 150ರಿಂದ ರು. 175ರ ವರೆಗೆ ಏರಿಕೆಯಾಗಿರುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕಲವೊಂದು ರಾಜ್ಯಗಳಲ್ಲಿ ಶೇಕಡಾ 12.5ರಷ್ಟು ವ್ಯಾಟ್ ತೆರಿಗೆ ಸಹ ಪಾವತಿಸಬೇಕಾಗುತ್ತದೆ.
ಆಟೋ ತಜ್ಞರ ಪ್ರಕಾರ ಇಂತಹ ತೆರಿಗೆ ಅವ್ಯವಹಾರವು ವಾಹನೋದ್ಯಮದ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತಿದೆ. ಜತೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಳಿತವು ಗಾಯದ ಮೇಲೆ ಬರೆ ಎಳೆದಂತಾಗಿದೆ.


Click it and Unblock the Notifications








