ದಟ್ಸನ್ ಗೊ ಆಕ್ಸೆಸರಿ ಪಟ್ಟಿ, ಬೆಲೆ ಇಂತಿದೆ ನೋಡಿ!

By Nagaraja

ಈ ಮೊದಲೇ ತಿಳಿಸಿರುವಂತೆಯೇ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು 2014 ಮಾರ್ಚ್ 19ರಂದು ಭರ್ಜರಿ ಲಾಂಚ್ ಕಾಣಲಿದೆ. ಇದರ ಟಾಪ್ ವೆರಿಯಂಟ್ ದರ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಜಪಾನ್ ಮೂಲದ ನಿಸ್ಸಾನ್ ವಾಹನ ತಯಾರಕ ಸಂಸ್ಥೆಯ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್, ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗುವ ಮೂಲಕ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಇದೀಗ ಈ ಸಣ್ಣ ಕಾರಿನಲ್ಲಿ ಲಭ್ಯವಾಗಲಿರುವ ಆಕ್ಸೆಸರಿ ಪ್ಯಾಕೇಜ್‌ಗಳ ದರ ಪ್ರಕಟಗೊಂಡಿದೆ. ಇದು ರೂಫ್ ರೈಲ್, ಸೈಡ್ ಬಾಡಿ ಮೌಲ್ಡಿಂಗ್ಸ್, ಕ್ರೋಮ್ ಡೋರ್ ಹ್ಯಾಂಡಲ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಎಕ್ಸಾಸ್ಟ್ ಟಿಪ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಬಂಪರ್ ಕಾರ್ನರ್ ಪ್ರೊಟೆಕ್ಷನ್, ಲೆಥರ್ ಸೀಟ್, ಸ್ಟೀರಿಂಗ್ ವೀಲ್ ಕವರ್, ರಿಮೋಟ್ ಲಾಕಿಂಗ್ ಮತ್ತು ಆಡಿಯೋ ಸಿಸ್ಟಂಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.


ಇವೆಲ್ಲ ಆಕ್ಸೆಸರಿಗಳ ದರ ಅತ್ಯಂತ ಕಡಿಮೆ ಅಂದರೆ ರು. 484ರಿಂದ ಆರಂಭವಾಗಿ ಗರಿಷ್ಠ ರು. 7986 ವರೆಗೆ ನಿಗದಿಯಾಗಿದೆ. ಈ ಎಲ್ಲ ಆಕ್ಸೆಸರಿಗಳು ದಟ್ಸನ್ ಶೋ ರೂಂಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಅತಿ ಪ್ರಾಮುಖ್ಯ ಅಂಶವೆಂದರೆ ಈ ಎಲ್ಲ ಆಕ್ಸೆಸರಿ ಸೌಲಭ್ಯ ಪಡೆಯುವುದರಿಂದ ನಿಮ್ಮ ವಾರಂಟಿ ಸೌಲಭ್ಯಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡುವುದಿಲ್ಲ.
Datsun Go

ದಟ್ಸನ್ ಆಕ್ಸೆಸರಿ ಸೌಲಭ್ಯ ಹಾಗೂ ದರಗಳು ಇಂತಿದೆ:
  • ಸ್ಟೀರಿಂಗ್ ವೇಲ್ ಕವರ್ ರು. 484
  • ಬಂಪರ್ ಕಾರ್ನರ್ ಪ್ರೊಟೆಕ್ಷನ್ ರು. 545
  • ಡೋರ್ ಹ್ಯಾಂಡಲ್ ಕ್ರೋಮ್ ರು. 590
  • ಎಕ್ಸಾಸ್ಟ್ ಟಿಪ್ ರು. 840
  • ಬಾಡಿ ಸೈಡ್ ಮೌಲ್ಡಿಂಗ್ ರು. 1045
  • ಕುಷನ್ (ದಿಂಬು) ಕಿಟ್ ರು. 1100
  • ಬಾಡಿ ಕವರ್ ರು. 1190
  • ಪಾರ್ಸೆಲ್ ಟ್ರೇ ರು. 2490
  • ಪೈಂಟ್ ಪ್ರೊಟೆಕ್ಟಿವ್ ಫಿಲ್ಮ್ ರು. 2550
  • ಬಾಡಿ ಗ್ರಾಫಿಕ್ಸ್ ರು. 2640
  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ರು. 2890
  • ಫ್ಯಾಬ್ರಿಕ್ ಸೀಟು ಕವರ್ ರು. 2990
  • ರೂಫ್ ರೈಲ್ ರು. 2970
  • ರೂಫ್ ಸ್ಪಾಯ್ಲರ್ ರು. 2998
  • ರಿಮೋಟ್ ಲಾಕಿಂಗ್ ರು. 2998
  • ಫಾಗ್ ಲ್ಯಾಂಪ್ ರು. 4650
  • ಲೆಥರ್ ಸೀಟ್ ಕವರ್ ರು. 4800
  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ರು. 7920
  • ಆಡಿಯೋ, ರೆಡಿಯೋ, ಸಿಡಿ, ಯುಎಸ್‌ಬಿ ಮತ್ತು ಆಕ್ಸ್ ರು. 7986

More from DriveSpark

Article Published On: Monday, March 17, 2014, 14:56 [IST]
English summary
Datsun will be launching its first official car the GO in India on 19th, March. The small car will be affordable to most, with a cost of Rs. 4 lakhs for its top-most variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+