ದಟ್ಸನ್ ಗೊ ನೆಕ್ಸ್ಟ್ ಸೀಮಿತ ಆವೃತ್ತಿ ಬಿಡುಗಡೆ

Written By:

ನಿಸ್ಸಾನ್ ಮೋಟಾರು ಇಂಡಿಯಾ ಸಂಸ್ಥೆಯ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ಅತಿ ನೂತನ ಗೊ ನೆಕ್ಸ್ಟ್ (Datsun GO NXT ) ಸೀಮಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರಮುಖವಾಗಿಯೂ ಐದು ವೈಶಿಷ್ಟ್ಯಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

ಬೆಲೆ ಮಾಹಿತಿ: 4.1 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

To Follow DriveSpark On Facebook, Click The Like Button
ದಟ್ಸನ್ ಗೊ ನೆಕ್ಸ್ಟ್

ಐದು ಪ್ರಮುಖ ವೈಶಿಷ್ಟ್ಯಗಳು

  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
  • ರಿಮೋಟ್ ಸೆಕ್ಯೂರಿಟಿ ಲಾಕ್,
  • ರಿಯರ್ ಪಾರ್ಸೆಲ್ ಟ್ರೇ,
  • ಒಳಮೈಯಲ್ಲಿ ಪಿಯಾನೊ ಬ್ಲ್ಯಾಕ್ ಫಿನಿಶ್,
  • ಹೊರಮೈಯಲ್ಲಿ ಕ್ರೋಮ್ ಫಿನಿಶ್ ಎಕ್ಸಾಸ್ಟ್ ಕೊಳವೆ

ಹಬ್ಬದ ಆವೃತ್ತಿಯ ಭಾಗವಾಗಿ ದಟ್ಸನ್ ಗೊ ನೆಕ್ಸ್ಟ್ ಬಿಡುಗಡೆಯಾಗಿದ್ದು ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳಿಂದ ವರ್ಷಾಂತ್ಯದಲ್ಲಿ ಡಿಸೆಂಬರ್ ವರೆಗೆ ಮಾತ್ರ ಮಾರಾಟವಾಗಲಿದೆ. ದೇಶದಲ್ಲಿ ಸ್ಥಿತಗೊಂಡಿರುವ 196ರಷ್ಟು ದಟ್ಸನ್ ಶೋ ರೂಂಗಳಲ್ಲಿ ನೂತನ ಗೊ ನೆಕ್ಸ್ಟ್ ಖರೀದಿಗೆ ಲಭ್ಯವಾಗಲಿದೆ.

ಅತ್ಯುತ್ತಮ ಸ್ಥಳಾವಕಾಶ, ನಿರ್ವಹಣೆ ಹಾಗೂ ಇಂಧನ ಕ್ಷಮತೆಯನ್ನು ಕಾಯ್ದುಕೊಂಡಿರುವ ದಟ್ಸನ್ ಗೊ ಮಾರಾಟಕ್ಕೆ ಉತ್ತೇಜನ ನೀಡುವ ಭರವಸೆಯಲ್ಲಿದೆ. ಸಂಸ್ಥೆಯು ವರ್ಷಾರಂಭದಲ್ಲಿ ದಟ್ಸನ್ ಗೊ ಪ್ಲಸ್ ಸಬ್ ಫೋರ್ ಮೀಟರ್ ಬಹು ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು.

English summary
Datsun GO NXT Limited Edition Model Launched
Story first published: Thursday, August 13, 2015, 14:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark