ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಕೋವಿಡ್ ಪರಿಣಾಮ ಏರಿಳಿತವಾಗುತ್ತಿರುವ ಹೊಸ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಮುಖ ಆಟೋ ಕಂಪನಿಗಳು ವಿವಿಧ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಸಹ ತಮ್ಮ ಪ್ರಮುಖ ಕಾರುಗಳ ಖರೀದಿ ಮೇಲೂ ವಿವಿಧ ಆಫರ್ ಘೋಷಣೆ ಮಾಡಿವೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಭಾರತದಲ್ಲಿ ಸಹಭಾಗಿತ್ವ ಯೋಜನೆ ಅಡಿ ಕಾರು ಉತ್ಪಾದನೆ ಕೈಗೊಳ್ಳುತ್ತಿರುವ ನಿಸ್ಸಾನ್, ರೆನಾಲ್ಟ್ ಮತ್ತು ದಟ್ಸನ್ ಕಂಪನಿಗಳು ಹೊಸ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಏಪ್ರಿಲ್ ಅವಧಿಯಲ್ಲಿ ವಿವಿಧ ಕಾರುಗಳ ಖರೀದಿ ಮೇಲೆ ಕನಿಷ್ಠ ರೂ. 20 ಸಾವಿರದಿಂದ ಗರಿಷ್ಠ ರೂ. 50 ಸಾವಿರದಷ್ಟು ಆಫರ್ ನೀಡಲಾಗುತ್ತಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ನಿಸ್ಸಾನ್ ಮತ್ತು ದಟ್ಸನ್ ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಭಾರತದಲ್ಲಿ ಸದ್ಯ ಜಂಟಿಯಾಗಿ ಕಾರು ಉತ್ಪಾದನೆ ಮತ್ತು ಮಾರಾಟ ಸೌಲಭ್ಯವನ್ನು ಹೊಂದಿರುವ ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಪೆಟ್ರೋಲ್ ಕಾರು ಮಾದರಿಗಳ ಮಾರಾಟವನ್ನು ಮಾತ್ರ ಹೊಂದಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ದಟ್ಸನ್ ಕಂಪನಿಯು ತನ್ನ ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಮಾದರಿಗಳ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಎಂಟ್ರಿ ಲೆವಲ್ ಕಾರುಗಳ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಉತ್ತಮ ಆಯ್ಕೆಗಳಿವೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ರೆಡಿ-ಗೊ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.83 ಲಕ್ಷದಿಂದ ರೂ. 4.95 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಖರೀದಿಯ ಮೇಲೆ ರೂ. 40 ಸಾವಿರ ತನಕ ಆಫರ್ ನೀಡಲಾಗುತ್ತಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ರೂ. 40 ಸಾವಿರ ತನಕ ಆಫರ್‌ನಲ್ಲಿ ರೂ.20 ಸಾವಿರ ತನಕ ಕ್ಯಾಶ್‌ಬ್ಯಾಕ್, ರೂ.15 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ನಲ್ಲಿ ದಟ್ಸನ್ ಗೊ ಮಾದರಿಯು ಸಹ ರೂ. 20 ಸಾವಿರ ತನಕ ಕ್ಯಾಶ್‌ಬ್ಯಾಕ್ ಆಫರ್ ಹೊಂದಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಗೊ ಪ್ಲಸ್ ಮಿನಿ ಎಂಪಿವಿ ಮಾದರಿಗಾಗಿ ದಟ್ಸನ್ ಕಂಪನಿಯು ರೂ.20 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಮತ್ತು ರೂ. 20 ಸಾವಿರದಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು, ಗೊ ಪ್ಲಸ್ ಕಾರು ಮಾದರಿಯು ದಟ್ಸನ್ ನಿರ್ಮಾಣದ ಬಜೆಟ್ ಬೆಲೆಯ ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಂಪಿವಿ ಕಾರು ಮಾದರಿಯಾಗಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ದಟ್ಸನ್ ಗೊ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.02 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.51 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಗೊ ಪ್ಲಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4. 25 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.99 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಮೊದಲ ಬಜೆಟ್ ಬೆಲೆಯ ಎಂಪಿವಿ ಕಾರು ಮಾದರಿಯಾಗಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಗೊ ಪ್ಲಸ್ ಕಾರು ಮಾದರಿಯು ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಇನ್ನು ಹೊಸ ಆಫರ್‌ಗಳಲ್ಲಿ ನಿಸ್ಸಾನ್ ಕಿಕ್ಸ್ ಮಾದರಿಯ ಮೇಲೂ ಆಕರ್ಷಕ ಆಫರ್ ಲಭ್ಯವಿದ್ದು, ಕಿಕ್ಸ್ ಮಾದರಿಯನ್ನು ಹೊರತುಪಡಿಸಿ ಮ್ಯಾಗ್ನೈಟ್ ಮಾದರಿಯ ಮೇಲೆ ಯಾವುದೇ ಆಫರ್ ಘೋಷಣೆ ಮಾಡಿಲ್ಲ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಕಿಕ್ಸ್ ಕಾರು ಮಾದರಿಯು 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಆಫರ್‌ಗಳಲ್ಲಿ ಸಾಮಾನ್ಯ ಪೆಟ್ರೋಲ್ ಮಾದರಿಯ ಮೇಲೆ ರೂ. 19 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ಆನ್‌ಲೈನ್ ಬುಕಿಂಗ್ ಮೇಲೆ ರೂ. 2 ಸಾವಿರ ಹೆಚ್ಚುವರಿ ಬೋನಸ್ ಲಭ್ಯವಾಗುತ್ತದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಹಾಗೆಯೇ ಕಿಕ್ಸ್ ಕಾರಿನ 1.3 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯ ಖರೀದಿಯ ಮೇಲೆ ರೂ. 50 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ಆನ್‌ಲೈನ್ ಬುಕಿಂಗ್ ಮೇಲೆ ರೂ. 5 ಸಾವಿರ ಹೆಚ್ಚುವರಿ ಬೋನಸ್ ಲಭ್ಯವಿದ್ದು, ಯಾವುದೇ ಕಾರ್ಪೊರೇಟ್ ರಿಯಾಯಿತಿಗಳು ಅಥವಾ ವಿನಿಮಯ ಬೋನಸ್‌ಗಳನ್ನು ಘೋಷಣೆ ಮಾಡಲಾಗಿಲ್ಲ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಕಿಕ್ಸ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 14.90 ಲಕ್ಷ ಬೆಲೆ ಹೊಂದಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನು ಹೊಂದಿದೆ.

Most Read Articles

Kannada
English summary
Nissan and datsun car discount for april benefits of up to rs 50 thousand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X