ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಜಾಗತಿಕವಾಗಿ ಆಟೋ ಉತ್ಪಾದನೆಯಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇನ್ನು ಕೆಲವು ಕಾರು ಕಂಪನಿಗಳು ಪ್ರತಿಸ್ಪರ್ಧಿ ಮಾದರಿಗಳೊಂದಿಗೆ ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಭಾರತೀಯ ಆಟೋ ಉದ್ಯಮದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಹಲವಾರು ಕಾರು ಕಂಪನಿಗಳು ಪ್ರವೇಶಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನು ಕೆಲವು ಕಾರು ಉತ್ಪಾದನಾ ಕಂಪನಿಗಳು ಮಾರುಕಟ್ಟೆಯಲ್ಲಿನ ಏರಿಳಿತ ಪರಿಣಾಮ ಉದ್ಯಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಇತ್ತೀಚೆಗೆ ಉದ್ಯಮದಲ್ಲಿ ಭಾರೀ ನಷ್ಟದ ಪರಿಣಾಮ ಭಾರತದಿಂದ ಫೋರ್ಡ್ ಹೊರನಡೆದ ಬೆನ್ನಲ್ಲೇ ಇದೀಗ ನಿಸ್ಸಾನ್ ತನ್ನ ಅಧೀನದಲ್ಲಿರುವ ದಟ್ಸನ್ ಬ್ರಾಂಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಭಾರತದಲ್ಲಿ ದಟ್ಸನ್ ಬ್ರಾಂಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಮುಂದಿನ 10 ವರ್ಷಗಳ ಅವಧಿಗೆ ಗ್ರಾಹಕರ ಸೇವೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಒದಗಿಸುವುದಾಗಿ ಘೋಷಣೆ ಮಾಡಿದೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ನಿಸ್ಸಾನ್ ಕಂಪನಿಯು ಜಾಗತಿಕ ಮಾರುಕಟ್ಟೆಯ ಕಾರ್ಯತಂತ್ರದ ಭಾಗವಾಗಿ ಹೆಚ್ಚು ಲಾಭದಾಯಕವಾದ ಪ್ರಮುಖ ಮಾದರಿಗಳು ಮತ್ತು ವಿಭಾಗಗಳ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದ್ದು, ದಟ್ಸನ್ ಬ್ರಾಂಡ್ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಹಿನ್ನಡೆ ಅನುಭವಿಸುತ್ತಲೇ ಇತ್ತು.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಭಾರತದಲ್ಲಿ ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಕಾರು ಮಾದರಿಗಳ ಮಾರಾಟ ಹೊಂದಿದ್ದ ದಟ್ಸನ್ ಕಂಪನಿಯು ಆರಂಭದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿತಾದರೂ ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿಸಿದ ಹೊಸ ಕಾರುಗಳ ಅಬ್ಬರ ನಡುವೆ ದಟ್ಸನ್ ಸಾಕಷ್ಟು ಕುಸಿತ ಕಂಡಿತ್ತು.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

2016ರಲ್ಲಿ ಮೊದಲ ಬಾರಿಗೆ ದಟ್ಸನ್ ಬ್ರಾಂಡ್ ಕಾರುಗಳನ್ನು ಭಾರತಕ್ಕೆ ಪರಿಚಯಿಸಿದ್ದ ನಿಸ್ಸಾನ್ ಕಂಪನಿಯು ಎಂಟ್ರಿ ಲೆವಲ್ ಕಾರು ಖರೀದಿದಾರರನ್ನು ಗುರಿಯಾಗಿ ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿತ್ತು.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಆರಂಭದ ಎರಡು ವರ್ಷಗಳಲ್ಲಿ ಉತ್ತಮ ಬೇಡಿಕೆ ದಾಖಲಿಸಿದ್ದ ದಟ್ಸನ್ ತದನಂತರದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಕಳೆದ ವರ್ಷ ಕೇವಲ 4,296 ಕಾರುಗಳನ್ನು ಮಾತ್ರ ಮಾಡಿದ್ದ ಕಂಪನಿ ಕಳಪೆ ಮಾರಾಟದೊಂದಿಗೆ ಶೇ. 0.09 ರಷ್ಟು ಮಾತ್ರವೇ ಮಾರುಕಟ್ಟೆ ಪಾಲು ದಾಖಲಿಸಿತ್ತು.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ದಟ್ಸನ್ ಮಾದರಿಗಳು ಆರಂಭದಲ್ಲಿ ಬಜೆಟ್ ಮಾದರಿಯಾಗಿ ಗುರುತಿಸಿಕೊಂಡರೂ ಇತ್ತೀಚೆಗೆ ಬದಲಾಗಿರುವ ಗ್ರಾಹಕರ ಅಭಿರುಚಿ, ಸುರಕ್ಷತೆ ಒತ್ತು ಮತ್ತು ಸ್ಪೋರ್ಟಿ ವಿನ್ಯಾಸಕ್ಕಿರುವ ಬೇಡಿಕೆಗಳು ದಟ್ಸನ್ ಕಾರುಗಳಿಗೆ ಭಾರೀ ಹೊಡೆತ ನೀಡಿವೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಹೀಗಾಗಿ ಮಾರಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಹೊಸ ಉತ್ಪನ್ನಗಳತ್ತ ಗಮನಹರಿಸುತ್ತಿರುವ ನಿಸ್ಸಾನ್ ಕಂಪನಿಯು ದಟ್ಸನ್ ಮಾದರಿಗಳಿಗಾಗಿ ಮೀಸಲಿದ್ದ ಕಾರು ಉತ್ಪಾದನಾ ಸೌಲಭ್ಯವನ್ನು ಹೆಚ್ಚು ಬೇಡಿಕೆಯಿರುವ ಮಾದರಿಗಳ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, ದಟ್ಸನ್ ಬ್ರಾಂಡ್ ಕಾರುಗಳನ್ನು ಭಾರತದಲ್ಲಿ ಮಾತ್ರವಲ್ಲ ಇಂಡೋನೇಷ್ಯಾ ಮತ್ತು ರಷ್ಯಾದಲ್ಲೂ ಕೂಡಾ ಸ್ಥಗಿತಗೊಳಿಸಲಾಗಿದೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಸದ್ಯ ದಟ್ಸನ್ ಕಾರು ಉತ್ಪಾದನೆ ಮತ್ತು ಮಾರಾಟವು ಸ್ಥಗಿತಗೊಂಡ ಗ್ರಾಹಕರ ಸೇವೆಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲವೆಂಬ ಭರವಸೆ ನೀಡಿರುವ ನಿಸ್ಸಾನ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ನಿಸ್ಸಾನ್ ಕಂಪನಿಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ಉತ್ಪಾದನಾ ಘಟಕವನ್ನು ವಿಸ್ತರಿಸಿದ್ದರೂ ಗ್ರಾಹಕರ ಬೇಡಿಕೆಯಲ್ಲಿ ಸತತ ಹಿನ್ನಡೆಯಿಂದ ಉದ್ಯಮ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿತ್ತು.

ಭಾರತದಲ್ಲಿ ಅಧಿಕೃತವಾಗಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಆದರೆ ಕಳೆದ ವರ್ಷ ಬಿಡುಗಡೆಗೊಂಡ ಮಾಗ್ನೈಟ್ ಮತ್ತು ಕಿಕ್ಸ್ ಮಾದರಿಗಳು ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುತ್ತಿದ್ದು, ಶೀಘ್ರದಲ್ಲಿಯೇ ಕಂಪನಿಯು ಮತ್ತಷ್ಟು ಹೊಸ ಮಾದರಿಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.

More from DriveSpark

Article Published On: Friday, April 22, 2022, 9:00 [IST]
English summary
Datsun discontinued officially from india details
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+