ಅಧಿಕೃತ; ಬಹುನಿರೀಕ್ಷಿತ ದಟ್ಸನ್ ಗೊ ಮಾ. 19ಕ್ಕೆ ಲಾಂಚ್

By Nagaraja

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಬಹುನಿರೀಕ್ಷಿತ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ಭಾರತ ಎಂಟ್ರಿಗೆ ಕ್ಷಣಗಣನೆ ಆರಂಭವಾಗಿದೆ. ಇದು ನಿಸ್ಸಾನ್ ಸಣ್ಣ ಕಾರು ಬ್ರಾಂಡ್ ದಟ್ಸನ್‌ನಿಂದ ದೇಶಕ್ಕೆ ಪರಿಚಿತವಾಗುತ್ತಿರುವ ಚೊಚ್ಚಲ ಕಾರಾಗಿದೆ.

ಎಲ್ಲರ ನಿರೀಕ್ಷೆಯಂತೆಯೇ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನಗೊಂಡಿದ್ದ ದಟ್ಸನ್ ಗೊ, ಮಾರ್ಚ್ 19ರಂದು ಲಾಂಚ್ ಆಗಲಿದೆ. 2013ನೇ ಇಸವಿಯ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ದಟ್ಸನ್, ಮುಂದಿನ ದಿನಗಳಲ್ಲಿ ದೇಶದ ರಸ್ತೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ.

Datsun Go

'ವಿ' ತಲಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ, ನಿಸ್ಸಾನ್ ಮೈಕ್ರಾ ಜತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಂಡಿದೆ. ಎಂಟ್ರಿ ಲೆವೆಲ್ ಕಾರು ಬಯಸುವವರಿಗೆ ಇದು ಹೆಚ್ಚು ಆಯಾಮ ಪಡೆದುಕೊಂಡಿದೆ. ಇದು 1,635 ಎಂಎಂ ಉದ್ದ, 1,485 ಎಂಎಂ ಎತ್ತರ ಹಾಗೂ 2,450 ಎಂಎಂ ವೀಲ್ ಬೇಸ್ ಪಡೆದುಕೊಂಡಿದೆ. ಈ ಎಲ್ಲದರ ಮೂಲಕ ಹೆಚ್ಚಿನ ಕ್ಯಾಬಿನ್ ಸ್ಪೇಸ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಯಾಕೆ ಹ್ಯಾಂಡ್ ಬ್ರೇಕ್ ಹಾಗೂ ಗೇರ್ ಲಿವರ್ ಸಹ ಡ್ಯಾಶ್‌ಬೋರ್ಡ್‌ನಲ್ಲೇ ಲಗತ್ತಿಸಿರುವುದು ಇನ್ನಷ್ಟು ಜಾಗ ಸೃಷ್ಟಿ ಮಾಡಲಿದೆ. ಇದರೊಂದಿಗೆ ಹಿಂದುಗಡೆ 265 ಲೀಟರ್ ಬೂಟ್ ಸ್ಪೇಸ್ ಸಹ ಇರಲಿದೆ.

ನೂತನ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 67 ಅಶ್ವಶಕ್ತಿ (106 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವರದಿಗಳ ಪ್ರಕಾರ ದಟ್ಸನ್ ಗೊ ಪ್ರಾರಂಭಿಕ ದರ ಮೂರು ಲಕ್ಷ ರು.ಗಳಿಷ್ಟಿರಲಿದ್ದು, ಟಾಪ್ ಎಂಡ್ ವೆರಿಯಂಟ್ ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗಿದ್ದರೂ ಎಬಿಎಸ್, ಏರ್ ಬ್ಯಾಗ್ ಮತ್ತು ಫಾಗ್ ಲ್ಯಾಂಪ್ ಕೊರತೆಯನ್ನು ಅನುಭವಿಸಲಿದೆ.

ಚೆನ್ನೈನಲ್ಲಿ ಸ್ಥಿತಗೊಂಡಿರುವ ರೆನೊ-ನಿಸ್ಸಾನ್ ಪಾಲುದಾರಿಕೆಯ ಓರಗಡಂ ಘಟಕದಲ್ಲಿ ಈಗಾಗಲೇ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಡುಗಡೆ ಬೆನ್ನಲ್ಲೇ ವಿತರಣೆ ಆರಂಭವಾಗಲಿದೆ. ಹಾಗೊಂದು ವೇಳೆ ನೀವು ಕೂಡಾ ದಟ್ಸನ್ ಗೊ ಸಣ್ಣ ಕಾರು ಖರೀದಿಸಲು ಬಯಸುವುದಾದ್ದಲ್ಲಿ ರು. 11,000 ಪಾವತಿಸಿ ಮುಂಗಡ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.

More from DriveSpark

Article Published On: Thursday, March 13, 2014, 12:16 [IST]
English summary
Datsun has officially confirmed the launch date of Go hatchback as March 19. Datsun first took the veils off of the Go in July 2013 and has since then displayed it across the country and at the Auto Expo giving people enough time to familiarize themselves with the brand name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+