ದೆಹಲಿಯಲ್ಲಿ 29 ಲಕ್ಷಕ್ಕೂ ಹೆಚ್ಚು ವಾಹನಗಳ ಓಡಾಟಕ್ಕೆ ಬ್ರೇಕ್!
ನಾವು ಈ ಹಿಂದೆ ವರದಿ ಮಾಡಿರುವಂತೆಯೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ತೀರ್ಪು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರಲಿದ್ದು, ಬರೋಬ್ಬರಿ 29 ಲಕ್ಷಕ್ಕೂ ಹೆಚ್ಚು ವಾಹನಗಳ ಓಡಾಟ ಸದ್ಯದಲ್ಲೇ ನಿಲುಗಡೆಗೊಳ್ಳಲಿದೆ.
ದೆಹಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನೀಡಿದ ಅರ್ಜಿಯನ್ನು ಪರಿಶೀಲಿಸಿ ಮಹತ್ವದ ತೀರ್ಪು ನೀಡಿದ್ದ ಹಸಿರು ಕೋರ್ಟ್, 15 ವರ್ಷಗಿಂತಲೂ ಹಳೆಯದಾದ ವಾಹನಗಳ ಓಡಾಟವನ್ನು ನಿಲುಗಡೆಗೊಳಿಸುವಂತೆ ಆದೇಶ ನೀಡಿತ್ತು.

ಇದರಂತೆ ಖಾಸಗಿ ಕಾರು, ಬೈಕ್, ವಾಣಿಜ್ಯ ವಾಹನ, ಬಸ್, ಟ್ರಕ್ ಸೇರಿದಂತೆ 29 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಬ್ರೇಕ್ ಹಾಕಲು ದೆಹಲಿ ಸರಕಾರ ಆದೇಶಿಸಿದೆ. ಈ ಬಗ್ಗೆ ಮಹತ್ವದ ಸಭೆ ಡಿಸೆಂಬರ್ 2 ಮಂಗಳವಾರದಂದು ಜರುಗಲಿದೆ.
ಈ ಸಂಬಂಧ ಹೇಳಿಕೆ ಕೊಟ್ಟಿರುವ ಸರಕಾರ ಮೂಲದ ಹಿರಿಯ ಅಧಿಕಾರಿಯೊಬ್ಬರು, ಹಸಿರು ನ್ಯಾಯಾಲದ ಆದೇಶದಂತೆ ನಾವು ಪರಿಶೀಲನೆ ನಡೆಸಿದ್ದು, ರಾಜ್ಯದಲ್ಲಿ 29 ಲಕ್ಷಕ್ಕೂ ಹೆಚ್ಚು ವಾಹನಗಳು 15 ವರ್ಷಗಿಂತಲೂ ಹಳೆಯದಾಗಿದೆ. ಇದರಲ್ಲಿ 8 ಲಕ್ಷ ನಾಲ್ಕು ಚಕ್ರದ ವಾಹನ ಅಂತೆಯೇ 20 ಲಕ್ಷಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸೇರಿವೆ ಎಂದಿದ್ದಾರೆ.
15 ವರ್ಷಗಿಂತಲೂ ಹಳೆಯದಾದ ವಾಹನಗಳಿಗೆ ಮರು ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೂಲಕ ಅಂತಹ ವಾಹನಗಳ ಭವಿಷ್ಯವನ್ನು ಮತ್ತಷ್ಟು ಐದು ವರ್ಷಗಳಿಗೆ ವಿಸ್ತರಿಸಬೇಕೇ ಎಂಬುದರ ಬಗ್ಗೆಯೂ ಸಭೆಯಲ್ಲಿ ತೀರ್ಮಾನವುಂಟಾಗುವ ಸಾಧ್ಯತೆಯಿದೆ.
ನುಲನ್ ಕಾರ್ ಕೇರ್ ಸೆಟ್ - ಶೇ. 10ರಷ್ಟು ರಿಯಾಯಿತಿ ಪಡೆಯಿರಿ - ತ್ವರೆ ಮಾಡಿ


Click it and Unblock the Notifications








