7 ವರ್ಷಗಳಲ್ಲೇ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ ಇಳಿಕೆ ?

By Nagaraja

ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಡೀಸೆಲ್ ಇಂಧನ ಬೆಲೆಗಳಲ್ಲಿ ಇಳಿಕೆ ಕಂಡುಬರುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಅರೇ ತಡೀರಿ, ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರಕ್ಕೆ ನೀಡಲು ಸಮಯವಾಗಿಲ್ಲ. ವಿಷಯ ಏನೆಂದರೆ ಜಾಗತಿಕ ಇಂಧನ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದ್ದು, ಬ್ಯಾರೆಲ್‌ಗೆ 100 ಡಾಲರ್‌ಗಿಂತಲೂ ಕಡಿಮೆಯಾಗಿದೆ.

Diesel price

ಈ ಹಿನ್ನಲೆಯಲ್ಲಿ ಭಾರತದಲ್ಲೂ ಇಂಧನ ಬೆಲೆಗಳಲ್ಲಿ ಇಳಿಕೆ ಕಂಡುಬರಲಿದೆ. ಈ ಎಲ್ಲ ಬೆಳವಣಿಗೆಗಳು ಬೆಲೆಏರಿಕೆ ಹಾಗೂ ಮಾನ್ಸೂನ್‌ನಿಂದಾಗಿ ಆಹಾರ ದರ ಏರಿಕೆ ಭೀತಿ ಎದುರಿಸುತ್ತಿರುವ ಸಾಮಾನ್ಯ ಗ್ರಾಹಕರಿಗೆ ಸ್ವಲ್ಪ ನಿರಾಳತೆಯನ್ನುಂಟು ಮಾಡಲಿದೆ.

ಅಂದ ಹಾಗೆ ಕಳೆದೊಂದು ವರ್ಷದಲ್ಲಿ ಜಾಗತಿಕ ಇಂಧನ ಬೆಲೆ ಮೊದಲ ಬಾರಿಗೆ 100 ಡಾಲರ್‌ಗಿಂತಲೂ ಕೆಳಗಿಳಿಯುತ್ತಿದೆ. ಇನ್ನೊಂದೆಡೆ ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಮುಂದುವರಿಯುತ್ತಿದೆ.

Most Read Articles

Kannada
English summary
Diesel price may come down for first time in 7 years
Story first published: Tuesday, September 9, 2014, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X