ಪ್ಯಾರಿಸ್ ಮೋಟಾರು ಶೋದಲ್ಲಿ 'ಫೆರಾರಿ 458 ಸ್ಪೆಷಲ್ ಎ' ಚಮಕ್
ಸೂಪರ್ ಕಾರು ಉತ್ಪಾದಕ ಸಂಸ್ಥೆಯಾಗಿರುವ ಫೆರಾರಿ ಸಂಸ್ಥೆಯು ಈ ಬಾರಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರು ಶೋದಲ್ಲಿ ಹೊಸತಾದ 'ಫೆರಾರಿ 458 ಸ್ಪೆಷಲ್ ಎ' ಮಾದರಿಯನ್ನು ಪ್ರದರ್ಶಿಸಲಿದೆ.
ನಿಮ್ಮ ಮಾಹಿತಿಗಾಗಿ ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ನಿರ್ಮಾಣವಾಗಲಿರುವ ಈ ಕಾರು ಸೀಮಿತ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಅಂದರೆ ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಇದನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ಪಡೆಯಲಿದೆ.

'ಫೆರಾರಿ 458 ಸ್ಪೆಷಲ್ ಎ' ಎಂಬ ಹೆಸರಿನಲ್ಲಿ ಎ ಎಂಬುದು ಅಪೆರ್ಟಾ ಎಂಬುದನ್ನು ಸೂಚಿಸುತ್ತದೆ. ಇದು ಫೆರಾರಿ ಯಶಸ್ಸಿನ ಸಂಕೇತವಾಗಿರಲಿದ್ದು, ಅತ್ಯಂತ ಶಕ್ತಿಶಾಲಿ ಎಂಜಿನ್ ಪಡೆಯಲಿದೆ.
ಫೆರಾರಿ 458 ಸ್ಪೈಡರ್ ಮಾದರಿ ತಲಹದಿಯಲ್ಲಿ ನಿರ್ಮಾಣವಾಗಿರುವ ಫೆರಾರಿ 458 ಸ್ಪೆಷಲ್ ಎ, ಸಂಸ್ಥೆಯ ಅತಿ ವೇಗದ ಸ್ಪೈಡರ್ ಮಾದರಿ ಎನಿಸಿಕೊಳ್ಳಲಿದೆ.

ಇದು ನೈಸರ್ಗಿಕವಾಗಿ ಚೋಷಿತ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 540 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಅಲ್ಲದೆ 0-100 ಕೀ.ಮೀ. ದೂರವನ್ನು ಕೇವಲ 3.0 ಸೆಕೆಂಡುಗಳಲ್ಲೇ ವೇಗವರ್ಧಿಸಲಿದೆ.

ಏರೋಡೈನಾಮಿಕ್ ಶೈಲಿಯೊಂದಿಗೆ ಪರಿಷ್ಕೃತ ದೇಹ ಶೈಲಿ ಮತ್ತು ವಿಶೇಷ ಬಣ್ಣದ ಆಯ್ಕೆಯನ್ನು ಹೊಸ ಫೆರಾರಿ ಸೂಪರ್ ಕಾರು ಪಡೆಯಲಿದೆ. ಇನ್ನು ಹಿಂದುಗಡೆ ಎರಡು ಎಕ್ಸಾಸ್ಟ್ ಪೈಪ್ ಇರಲಿದೆ.


Click it and Unblock the Notifications








