ಫೆರಾರಿಯ ಮೊದಲ 'ಸ್ಪೆಷಲ್ ಎ' ಮಾದರಿ 5.5 ಕೋಟಿ ರು.ಗೆ ಹರಾಜು

By Nagaraja

ಉತ್ತರ ಅಮೆರಿಕಕ್ಕೆ ಪ್ರವೇಶಿಸಿ 60 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳಲು ವಿಶ್ವದ ದುಬಾರಿ ಸೂಪರ್ ಕಾರು ಸಂಸ್ಥೆಯಾಗಿರುವ ಫೆರಾರಿ ನೂತನ ಫೆರಾರಿ ಎಫ್ 60 ಅಮೆರಿಕ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಕನ್ವರ್ಟಿಬಲ್ ಮಾದರಿಯನ್ನು ಪರಿಚಯಿಸಿತ್ತು.

ಇದು ಸೀಮಿತ 10 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದೆ. ಇದರ ಜೊತೆಗೆ ಮೊದಲ 458 ಸ್ಪೆಷಲ್ ಎ (Ferrari Speciale A ) ಮಾದರಿಯನ್ನು ಫೆರಾರಿ ಅನಾವರಣಗೊಳಿಸಿತ್ತು.

ವರದಿಗಳ ಪ್ರಕಾರ ಫೆರಾರಿಯ 458 ಸ್ಪೆಷಲ್ ಎ ಬರೋಬ್ಬರಿ ಒಂಬತ್ತು ಲಕ್ಷ ಅಮೆರಿಕನ್ ಡಾಲರ್‌ಗೆ ಹರಾಜಾಗಿದೆ. ಇದನ್ನು ಡೇವಿಡ್ ಗುಡಿಂಗ್ ಎಂಬವರನ್ನು ಖರೀದಿಸಿದ್ದಾರೆ.

Ferrari Speciale A

ಇಲ್ಲಿ ಸಂಗ್ರಹವಾದ ಮೊತ್ತವನ್ನು ಅಮರಿಕದಲ್ಲಿರುವ ಇಟಲಿಯ ಮೂಲದ ಸಹಾಯಾರ್ಥ ಸಂಸ್ಥೆ 'ಡೇಬ್ರೇಕ್‌'ಗೆ ನೀಡಲಾಗುವುದು. ಪ್ರಸ್ತುತ ಸಂಸ್ಥೆಯು ಅಪರೂಪದ ಅನುವಂಶಿಕ ಕಾಯಿಲೆಯ ಚಿಕಿತ್ಸೆಗಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ.

ಅಂದ ಹಾಗೆ ಫೆರಾರಿ ಸ್ಪೆಷಲ್ ಎ ಕಾರು, ನೈಸರ್ಗಿಕ ಚೋಷಿತ 4.5 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 597 ಅಶ್ವಶಕ್ತಿ (540 ಎನ್‌ಎಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಮೂರು ಸೆಕೆಂಡುಗಳಲ್ಲೇ ಗಂಟೆಗೆ 62 ಕೀ.ಮೀ. ವೇಗವನ್ನು ಪಡೆಯಲಿದೆ.

2014 ಪ್ಯಾರಿಸ್ ಮೋಟಾರು ಶೋದಲ್ಲಿ ಅನಾವರಣಗೊಂಡಿರುವ ಸ್ಪೆಷಲ್ ಎ, ಫೆರಾರಿಯ ಅತಿ ಹೆಚ್ಚು ಏರನೋಡೈನಾಮಿಕ್ ವಿನ್ಯಾಸ ಪಡೆದ ಕಾರೆನಿಸಿಕೊಳ್ಳಲಿದ್ದು, ಸೀಮಿತ 499 ಯುನಿಟ್‌ಗಳಷ್ಟು ಮಾತ್ರ ಮಾರಾಟದಲ್ಲಿರಲಿದೆ.

More from DriveSpark

Article Published On: Thursday, October 16, 2014, 12:54 [IST]
English summary
Ferrari also unveiled the first 458 Speciale A, which was auctioned out. The buyer, David Gooding, bought the car for a whopping USD 900,000!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+