2 ದಶಕಗಳ ಬಳಿಕ ರಾಜೀನಾಮೆ ಸಲ್ಲಿಸಿದ ಫೆರಾರಿ ಮುಖ್ಯಸ್ಥ
ಎರಡು ದಶಕಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಲುಕಾ ಕಾರ್ಡೆರೊ ಡಿ ಮೊಂಟೆಝ್‌ಮೊಲೊ (Luca Cordero di Montezemolo) ತಮ್ಮ ಫೆರಾರಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ ಮಾಲಿಕನ ಜೊತೆ ಉಂಟಾಗಿರುವ ಅಭಿಪ್ರಾಯ ವ್ಯತ್ಯಾಸವೇ ರಾಜೀನಾಮೆಗೆ ಕಾರಣ ಎನ್ನಲಾಗಿದೆ.
ಇದರೊಂದಿಗೆ ಫೆರಾರಿ ಸೂಪರ್ ಕಾರು ಏಳಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಲುಕಾ, ಅಕ್ಟೋಬರ್ 13ರಂದು ತಮ್ಮ ಸ್ಥಾನಕ್ಕೆ ಗುಡ್ ಬೈ ಹೇಳಲಿದ್ದಾರೆ.

ಫೆರಾರಿ ಮಾತೃಸಂಸ್ಥೆ ಫಿಯೆಟ್ ಸಂಸ್ಥೆಯ ಸಿಇಒ ಸೆರ್ಗಿಯೊ ಮಾರ್ಸಿಯೊನ್ ಜೊತೆ ಒಡಕು ಉಂಟಾಗಿರುವುದು ನಿವೃತ್ತಿಗೆ ಎಡೆ ಮಾಡಿಕೊಟ್ಟಿದೆ ಎಂಬ ವರದಿ ಬಂದಿದೆ.
ಅಷ್ಟೇ ಯಾಕೆ ಇತ್ತೀಚೆಗಿನ ಇಟಲಿಯನ್ ಗ್ರ್ಯಾನ್ ಪ್ರಿ ಟೂರ್ನಿಯಲ್ಲೂ ಫೆರಾರಿ ಅತ್ಯಂತ ಕಳಪೆ ಮಟ್ಟದ ಪ್ರದರ್ಶನ ನೀಡಿತ್ತು. ಅಲ್ಲದೆ ಒಂದೇ ಒಂದು ರೇಸ್ ಗೆಲ್ಲಲು ಸಾಧ್ಯವಾಗದೇ ಇರುವುದು ಮುಖಭಂಗಕ್ಕೆ ಕಾರಣವಾಗಿತ್ತು.
200ರಿಂದ 2004ನೇ ಅವಧಿಯಲ್ಲಿ ಮೈಕಲ್ ಶುಮೇಕರ್ ನೇತೃತ್ವದಲ್ಲಿ ಕಸ್ಟರ್ಟಕ್ಟರ್ ಚಾಂಪಿಯನ್‌ಶಿಪ್ ಎನಿಸಿಕೊಂಡಿದ್ದ ಫೆರಾರಿ 57 ರೇಸ್‌ಗಳನ್ನು ಗೆದ್ದುಕೊಂಡಿತ್ತು. ಆದರೆ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿರುವುದು ಹಿನ್ನಡೆಯನ್ನುಂಟು ಮಾಡಿತ್ತು.


Click it and Unblock the Notifications








