ಅಮೆರಿಕದಲ್ಲಿ ಫೆರಾರಿ ಎಫ್60 ಅನಾವರಣ
ಉತ್ತರ ಅಮೆರಿಕದಲ್ಲಿ ತನ್ನ ಸಾನಿಧ್ಯದ 60ನೇ ವರ್ಷದ ಸಂಭ್ರಮದಲ್ಲಿರುವ ಫೆರಾರಿ ಸಂಸ್ಥೆಯು ಎಫ್60 ಸೀಮಿತ ಆವೃತ್ತಿಯನ್ನು ಅನಾವರಣಗೊಳಿಸಿದೆ.
ವಿಶೇಷವೆಂದರೆ ಸೀಮಿತ 10 ಯುನಿಟ್‌ಗಳಷ್ಟೇ ಉತ್ಪಾದನೆಯಾಗಲಿದೆ. ವರದಿಗಳ ಪ್ರಕಾರ ಈ ಎಲ್ಲ ಮಾದರಿಗಳು ಈಗಾಗಲೇ ಬುಕ್ಕಿಂಗ್ ಆಗಿವೆ.

ಎಫ್12 ಬರ್ಲಿನೆಟ್ಟಾ ವರ್ಷನ್ ಆಗಿರುವ ಈ ಓಪನ್ ಟಾಪ್ ವರ್ಷನ್ ಹೆಚ್ಚು ಕುತೂಹಲ ಕೆರಳಿಸಿದೆ. ಯಾಕೆಂದರೆ ಅಮೆರಿಕನ್ನರಿಗೆ ಓಪನ್ ಟಾಪ್ ಡ್ರೈವಿಂಗ್ ಮತ್ತು ವಿ12 ಎಂಜಿನ್ ಹೆಚ್ಚು ಪ್ರೀತಿ ಪಾತ್ರವಾಗಿದೆ.
ಇದು ಫೆರಾರಿ ಸೂಪರ್ ಕಾರುಗಳ ಮಹಿಮೆಯನ್ನು ಎತ್ತಿ ಹಿಡಿಯಲಿದೆ. ಇದು ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.


Click it and Unblock the Notifications








