ರೆನೊ ಕೊಲಿಯೊಸ್ ಮೊದಲ ಕೀಲಿ ಸಲ್ಮಾನ್‌ಗೆ ಹಸ್ತಾಂತರ
ಫ್ರಾನ್ಸ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ನೂತನ 2014 ಕೊಲಿಯೊಸ್ ಪ್ರೀಮಿಯಂ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದೆ. ಅಷ್ಟೇ ಯಾಕೆ 2014 ರೆನೊ ಕೊಲಿಯೊಸ್ ಕಾರಿನ ಮೊದಲ ಕೀಲಿಯನ್ನು ಬಾಲಿವುಡ್‌ನ 'ಜೈ ಹೋ' ಖ್ಯಾತಿಯ ನಟ ಸಲ್ಮಾನ್ ಖಾನ್‌ಗೆ ಹಸ್ತಾಂತರಿಸಲಾಗಿದೆ.
ರೆನೊ ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ಸಮಾರಂಭದಲ್ಲಿ ರೆನೊ ಇಂಡಿಯಾ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುಮಿತ್ ಶೋನಿ (Sumit Sawhney) ಅವರು ನಟ ಸಲ್ಮಾನ್ ಖಾನ್‌ಗೆ ಕೀಲಿ ಹಸ್ತಾಂತರಿಸಿದರು.

173 ಪಿಎಸ್ ಪವರ್ ಉತ್ಪಾದಿಸಬಲ್ಲ ಎಂಜಿನ್ ಜತೆಗೆ ಆಟೋಮ್ಯಾಟಿಕ್ 4x4, 6 ಸ್ಪೀಡ್ ಟ್ರಾನ್ಸ್‌ಮಿಷನ್ ಅನುಕೂಲ ಹಾಗೂ ಆರಾಮದಾಯಕ ಚಾಲನೆಯನ್ನು ಒದಗಿಸಲಿದೆ. ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ರೆನೊ ಕೊಲಿಯೊಸ್ 8 ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಂ ಕೂಡಾ ಪಡೆದಿದೆ.
ನಿಮ್ಮ ಮಾಹಿತಿಗಾಗಿ ಚೆನ್ನೈನ ಓರಗಾಡಂ ಘಟಕದಲ್ಲಿ ರೆನೊ ಕೊಲಿಯೊಸ್ ಜೋಡಣೆ ಮಾಡಲಾಗುವುದು. ಇದು 4x4 ಆಟೋಮ್ಯಾಟಿಕ್ ಜತೆಗೆ 4x2 ಮತ್ತು 4x4 ಮ್ಯಾನುವಲ್ ಗೇರ್ ಬಾಕ್ಸ್ ಕೂಡಾ ಹೊಂದಿರಲಿದೆ.
ಈ ಪೈಕಿ 4x4 ಎಂಜಿನ್ 173 (360 ಎನ್‌ಎಂ ಟಾರ್ಕ್) ಹಾಗೂ 4x2 ವೆರಿಯಂಟ್ 150 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಕೊಲಿಯೊಸ್ 4x2, 4x4 ಮ್ಯಾನುವಲ್ ಮತ್ತು 4x4 ಆಟೋಮ್ಯಾಟಿಕ್ ವೆರಿಯಂಟ್‌ಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 17.15, 16.26 ಮತ್ತು 14.56 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ನಿಮ್ಮ ಮಾಹಿತಿಗಾಗಿ, ಬಹುನಿರೀಕ್ಷಿತ 2014 ರೆನೊ ಕೊಲಿಯೊಸ್ 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ. ಅಲ್ಲದೆ ಈ ಫೇಸ್‌ಲಿಫ್ಟ್ ವರ್ಷನ್ ಇದೇ ಮೊದಲ ಬಾರಿಗೆ ಟು ವೀಲ್ ಡ್ರೈವ್ ವೆರಿಯಂಟ್ ಪಡೆದುಕೊಳ್ಳಲಿದೆ. ಹಾಗೆಯೇ ಪ್ರಾರಂಭಿಕ ದರ 22 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


Click it and Unblock the Notifications








