ಫ್ಲೈ ಬಸ್ ದರದಲ್ಲಿ ಗಣನೀಯ ಇಳಿಕೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಿಸಿದೆ. ಪರಿಷ್ಕೃತ ದರವು ಹೊಸ ವರ್ಷಕ್ಕೆ ಅಂದರೆ ಜನವರಿ 2ರಿಂದಲೇ ಜಾರಿಗೆ ಬಂದಿದೆ.

ಪರಿಷ್ಕೃತ ದರ ಇಂತಿದೆ:
ದೊಡ್ಡವರಿಗೆ: ರು 800
ಹಿಂದಿನ ದರ: ರು. 1000
ಮಕ್ಕಳಿಗೆ: ರು. 600
ಹಿಂದಿನ ದರ: ರು. 750
ಫ್ಲೈಬಸ್ ಹೊರಡುವ ಸಮಯ ಇಂತಿದೆ:
ಕೆಂಪೇಗೌಡ ವಿಮಾನ ನಿಲ್ದಾಣದಿಂದ: ಬೆಳಗ್ಗೆ 10.30ಕ್ಕೆ ಹಾಗೂ ರಾತ್ರಿ 11 ಗಂಟೆಗೆ
ಮೈಸೂರಿನಿಂದ: ಸಂಜೆ 3.00ಕ್ಕೆ ಹಾಗೂ ಮಧ್ಯರಾತ್ರಿ 1.00 ಗಂಟೆಗೆ.


Click it and Unblock the Notifications








