ಹೊಸ ಲುಕ್‌ನಲ್ಲಿ 2014 ಫೋರ್ಸ್ ಗುರ್ಖಾ

By Nagaraja

ಈ ಹಿಂದೆ 2013 ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಗುರ್ಖಾ ಎಸ್‌ಯುವಿ ಲಾಂಚ್ ಮಾಡಿದ್ದ ಫೋರ್ಸ್ ಮೋಟಾರ್ಸ್, ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು. ಪರಿಣಾಮವೆಂಬಂತೆ ಹಲವಾರು ಋಣಾತ್ಮಕ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು.

ಇದೀಗ ಗ್ರಾಹಕರ ವಿಮರ್ಶೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಫೋರ್ಸ್ ಸಂಸ್ಥೆಯು, ಅನೇಕ ಬದಲಾವಣೆಗಳೊಂದಿಗೆ 2014 ಗುರ್ಖಾ ಎಸ್‌ಯುವಿ ವಿತರಣೆ ಪ್ರಕ್ರಿಯೆಯನ್ನು ಮುಂಬರುವ ಸೆಪ್ಟೆಂಬರ್ ತಿಂಗಳಿಂದ ಆರಂಭಿಸಲಿದೆ. ಈ ಹಿಂದಿನ ಮಾಲಿಕರಿಂದಲೂ ವಿಷಯ ಸಂಗ್ರಹಣೆ ಮಾಡಿರುವ ಫೋರ್ಸ್ ಸಂಸ್ಥೆಯು ಅಗತ್ಯ ಮಾರ್ಪಾಡುಗಳನ್ನು ಮಾಡಿವೆ. ಇನ್ನು ಬುಕ್ಕಿಂಗ್ ಸಹ ಸೆಪ್ಟೆಂಬರ್ ತಿಂಗಳಿನಿಂದಲೇ ಆರಂಭವಾಗಲಿದೆ.


ಹಿಂದಿನ ತಲೆಮಾರಿನ ವಾಹನಗಳನ್ನು ಗಮನಿಸಿದಾಗ ಹೊಸ ಫೋರ್ಸ್ ಎಸ್‌‍ಯುವಿ, ಫಿಟ್ ಆಂಡ್ ಫಿನಿಶ್ ಗುಣಮಟ್ಟತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಹಾಗೆಯೇ ಎಂಜಿನಿಯರ್‌ಗಳು ಕಾರಿನ ಒಳಮೈ ಫೈನ್ ಟ್ಯೂನ್ ಮಾಡುವುದರಲ್ಲಿ ವಿಶೇಷ ಗಮನ ಹರಿಸಿದ್ದಾರೆ.

ನೈಜ ಆಫರ್ ರೋಡರ್ ಎನಿಸಿಕೊಂಡಿರುವ ಫೋರ್ಸ್ 4x4, 2.6 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ. ಹಾಗೆಯೇ 82 ಅಶ್ವಶಕ್ತಿ (230 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

Force Gurkha

ಅಂತಿಮವಾಗಿ ಅಂದಾಜು ಎಂಟರಿಂದ ಎಂಟು ವರೆ ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಲಿರುವ ಫೋರ್ಸ್ ಎಸ್‌ಯುವಿ, ಪ್ರಮುಖವಾಗಿಯೂ ಮಹೀಂದ್ರ ಥಾರ್ ಮಾದರಿಗೆ ಸ್ಪರ್ಧೆ ಒಡ್ಡಲಿದೆ. ಹಾಗೆಯೇ ಮೂರು ವರ್ಷಗಳ ಅಥವಾ ಮೂರು ಲಕ್ಷ ಕೀ.ಮೀ.ಗಳ ವಾರಂಟಿ ಸಹ ಲಭ್ಯವಿರಲಿದೆ.

More from DriveSpark

Article Published On: Friday, June 6, 2014, 11:45 [IST]
English summary
The Indian manufacturer is promising there would be more test vehicles for potential buyers to test out. Force has taken the feedback from previous owners and auto enthusiasts, to improve its product. Deliveries and booking of the vehicle will continue from September, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+