ಫೋರ್ಡ್ ಕ್ಲಾಸಿಕ್ ಸೆಡಾನ್ ಕಾರಿನ ಬೆಲೆ ಇಳಿಕೆ

By Nagaraja

ಅಮೆರಿಕ ಮೂಲದ ಸಂಸ್ಥೆಯಾಗಿರುವ ಫೋರ್ಡ್, ಭಾರತದಲ್ಲಿ ತನ್ನ ಕ್ಲಾಸಿಕ್ ಸೆಡಾನ್ ಕಾರಿನ ದರವನ್ನು ಕಡಿತಗೊಳಿಸಿದೆ. ಹೊಸ ದರ ನೀತಿಯಂತೆ ಫೋರ್ಡ್ ಕ್ಲಾಸಿಕ್ ದೆಹಲಿ ಪ್ರಾರಂಭಿಕ (ತೆರಿಗೆ ಹೊರತುಪಡಿಸಿ) ದರ 4.88 ಲಕ್ಷ ರು.ಗಳಾಗಿರಲಿದೆ.

ಅಂದರೆ ಸಬ್ 4 ಮೀಟರ್ ಕಾಂಪಾಕ್ಟ್ ಸೆಡಾನ್ ರೇಂಜ್‌ನಲ್ಲಿಯೇ ಫೋರ್ಡ್ ಕ್ಲಾಸಿಕ್ ಮಾರಾಟವಾಗಲಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ಇರಾದೆಯನ್ನು ಫೋರ್ಡ್ ಹೊಂದಿದೆ.


ಫೋರ್ಡ್ ಕ್ಲಾಸಿಕ್, ಈಗಲೂ ತನ್ನದೇ ಆದ ಸ್ಥಾನಮಾನವನ್ನು ಉಳಿಸಿಕೊಂಡಿದೆ. ಇದು 11.43 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿರಲಿದೆ. 1.6 ಲೀಟರ್, 4 ಸಿಲಿಂಡರ್ ಡ್ಯುರಟೆಕ್ ಪೆಟ್ರೋಲ್ (101 ಅಶ್ವಶಕ್ತಿ, 146 ಎನ್‌ಎಂ ಟಾರ್ಕ್) ಹಾಗೂ 1.4 ಲೀಟರ್ 4 ಸಿಲಿಂಡರ್ ಡ್ಯುರಟೆಕ್ ಡೀಸೆಲ್ ಎಂಜಿನ್ (68 ಅಶ್ವಶಕ್ತಿ, 160 ಎನ್‌ಎಂ ಟಾರ್ಕ್) ಇರಲಿದೆ. ಹಾಗೆಯೇ 5 ಸ್ಪೀಡನ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.

ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಫೋರ್ಡ್ ಕ್ಲಾಸಿಕ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 14.09 ಹಾಗೂ 19.68 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Ford Classic

ಐದು ಲಕ್ಷ ರು.ಗಳ ಒಳಗಡೆ ಆಗಮನವಾಗಲಿರುವ ಫೋರ್ಡ್ ಕ್ಲಾಸಿಕ್ ಬೇಸಿಕ್ ವೆರಿಯಂಟ್, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ರಿಯರ್ ಫಾಗ್ ಲ್ಯಾಂಪ್, ಎಸಿ, ಫ್ರಂಟ್ ಆಂಡ್ ರಿಯರ್ ಪವರ್ ವಿಂಡೋ, ಪವರ್ ಸ್ಟೀರಿಂಗ್‌ಗಳಂತಹ ವೈಶಿಷ್ಟ್ಯಗಳನ್ನು ಸ್ಟಾಂಡರ್ಡ್ ಆಗಿ ಪಡೆಯಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಕ್ಲಾಸಿಕ್ 1.6 ಡ್ಯುರಟೆಕ್ ಎಲ್‌ಎಕ್ಸ್‌ಐ - ರು. 4,88,016
ಕ್ಲಾಸಿಕ್ 1.6 ಡ್ಯುರಟೆಕ್ ಸಿಎಲ್‌ಎಕ್ಸ್‌ಐ - ರು. 5,56,827
ಕ್ಲಾಸಿಕ್ 1.6 ಡ್ಯುರಟೆಕ್ ಟೈಟಾನಿಯಂ - ರು. 6,34,913
ಕ್ಲಾಸಿಕ್ 1.4 ಟಿಡಿಸಿಐ ಎಲ್‌ಎಕ್ಸ್‌ಐ - ರು. 6,18,917
ಕ್ಲಾಸಿಕ್ 1.4 ಟಿಡಿಸಿಐ ಸಿಎಲ್‌ಎಕ್ಸ್‌ಐ - ರು. 6,65,298
ಕ್ಲಾಸಿಕ್ 1.4 ಟಿಡಿಸಿಐ ಟೈಟಾನಿಯಂ - ರು. 7,34,944

More from DriveSpark

Article Published On: Friday, May 9, 2014, 11:55 [IST]
English summary
Ford has dropped the price of its Classic sedan model once again. The full sized sedan is now has a starting price of INR 4.88 lakh before Taxes in Delhi. That slots it in the same price range as new sub-4 meter compact sedans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+