ಆಟೋ ಎಕ್ಸ್ ಫೋದಲ್ಲಿ ಫೋರ್ಡ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ
ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರಂತೆ ಈ ಪ್ರಖ್ಯಾತ ಆಟೋ ಶೋದಲ್ಲಿ ಪೋರ್ಡ್ ತನ್ನ ನೂತನ ಕಾನ್ಸೆಪ್ಟ್ ಮಾದರಿಯೊಂದಿಗೆ ಮುಂದೆ ಬರಲಿದೆ.
ಜಾಗತಿಕ ವಿನ್ಯಾಸವನ್ನು ಅನುಸರಿಸಿರುವ ಫೋರ್ಡ್, ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ನೂತನ ಮಾದರಿ ಅನಾವರಣಗೊಳಿಸಲಿದೆ.

ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚುತ್ತಿರುವಂತೆಯೇ ಕಾಂಪಾಕ್ಟ್ ಕಾರು ವಿಭಾಗದಲ್ಲೂ ನಿಕಟ ಪೈಪೋಟಿ ಕಂಡುಬರುತ್ತಿದೆ. ಇದರಂತೆ ಫೋರ್ಡ್ ಕೂಡಾ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮಗ್ನವಾಗಿದೆ.
ಗ್ರಾಹಕರ ನಿರೀಕ್ಷೆಗೆ ತಕ್ಕ ಉತ್ಪನ್ನ ಪ್ರದರ್ಶಿಸುವುದು ಫೋರ್ಡ್ ಇರಾದೆಯಾಗಿದೆ. ಇದು ಎಲ್ಲ ಹಂತದಲ್ಲೂ ಅತ್ಯುತ್ತಮ ಇಂಧನ ಕ್ಷಮತೆ, ಸುರಕ್ಷಿತ ಮತ್ತು ಗರಿಷ್ಠ ನಿರ್ವಹಣೆಯ ಕಾರಾಗಿರಲಿದೆ ಎಂದಿದೆ. ಈ ಹಿಂದೆ ಫೋರ್ಡ್‌ನ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಭಾರಿ ಸದ್ದು ಮಾಡಿತ್ತು. ಇದರ ಇಕೊಬೂಸ್ಟ್ ಎಂಜಿನ್ ಇಕೊಸ್ಪೋರ್ಟ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.


Click it and Unblock the Notifications








