ನಿಮ್ಮನ್ನು ತಂಪಾಗಿರಿಸಲು ಇಕೋಸ್ಪೋರ್ಟ್ ಕ್ಲೈಮೇಟ್ ಕಂಟ್ರೋಲ್
ನಿಮಗೆ ದೂರ ಪ್ರಯಾಣ ಕೈಗೊಳ್ಳುವ ಹವ್ಯಾಸವಿದೆಯೇ? ಈ ಬೇಸಿಗೆ ಕಾಲದಲ್ಲಿ ವಿಪರೀತ ದೆಗೆಯು ಆವರಿಸಿ ಬಿಟ್ಟಿದೆಯೇ? ಚಿಂತೆ ಮಾಡಬೇಡಿ ಎಂತಹುದೇ ಕ್ಲಿಷ್ಟಕರ ಸಮಯದಲ್ಲೂ ಫೋರ್ಡ್ ಕ್ಲೈಮೇಟ್ ಕಂಟ್ರೋಲ್ ನಿಮ್ಮ ಪಯಣವನ್ನು ಆನಂದವಾಗಿಸಲಿದೆ.
ಫೋರ್ಡ್‌ನ ಜನಪ್ರಿಯ ಇಕೊಸ್ಪೋರ್ಟ್‌ನಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. ಬೇಸಿಗೆ ಕಾಲದಲ್ಲಿ ಇದು ತುಂಬಾನೇ ಉಪಯುಕ್ತವಾಗಲಿದೆ ಎಂದು ಕಂಪನಿ ತಿಳಿಸುತ್ತದೆ.

ವರದಿಯ ಪ್ರಕಾರ ನೆರಳು ಆವರಿಸಿಕೊಳ್ಳದ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದಲ್ಲಿ ವಾಹನದ ತಾಪಮಾನ 70 ಡಿಗ್ರಿ ವರೆಗೂ ವರ್ಧಿಸುತ್ತದೆ. ಅಲ್ಲದೆ ಬೇಗನೇ ಬಿಸಿ ಕಡಿಮೆಯಾಗುವುದಿಲ್ಲ. ಈ ಎಲ್ಲ ಪರಿಸ್ಥಿತಿಗಳನ್ನು ಇಕೊಸ್ಪೋರ್ಟ್‌ನ ಮುಂದುವರಿದ ಕ್ಲೈಮೇಟ್ ಕಂಟ್ರೋಲ್ ನಿಯಂತ್ರಿಸಲಿದೆ.
ಗ್ರಾಹಕರ ಆರಾಮದಾಯಕ ಪಯಣ ಖಾತ್ರಿಪಡಿಸುವುದು ಇಕೊಸ್ಪೋರ್ಟ್ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಗರಿಷ್ಠ ತಂತ್ರಜ್ಞಾನಕ್ಕೆ ಮೊರೆ ಹೋಗಲಾಗಿದೆ.


Click it and Unblock the Notifications








