ಸದ್ಯದಲ್ಲೇ ಫೋರ್ಡ್ ಫಿಯೆಸ್ಟಾ 2014 ಫೇಸ್‌ಲಿಫ್ಟ್ ಲಾಂಚ್

By Nagaraja

ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ದೇಶಕ್ಕೆ ಪರಿಚಯಿಸುವ ಯೋಜನೆಯಲ್ಲಿದೆ. ಎಲ್ಲ ಹೊಸತನದಿಂದ ಕೂಡಿದ 2014 ಫೋರ್ಡ್ ಫಿಯೆಸ್ಟ್ ಫೇಸ್‌ಲಿಫ್ಟ್ ಮಾದರಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಈ ಹಿಂದೆ ಫೆಬ್ರವರಿಯಲ್ಲಿ ನಡೆದ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಹೊಸ ಫೋರ್ಡ್ ಫಿಯೆಸ್ಟಾ, ಅನೇಕ ಹೊಸ ವಿಶಿಷ್ಟತೆಗಳನ್ನು ಪಡೆದುಕೊಳ್ಳಲಿದೆ. ಪ್ರಸ್ತುತ ಕಾರು ಮೂರು ವರ್ಷಗಳ ಹಿಂದೆ 2011ರಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಿತ್ತು.


ಕಾರಿನ ಹೊರಮೈ ಬದಲಾವಣೆ ಜತೆಗೆ ಕಾರಿನೊಳಗೆ ಹೆಚ್ಚಿನ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ಹಿಂದಿನ ತಲೆಮಾರಿಗಿಂತಲೂ ಹೆಚ್ಚು ಆಕರ್ಷಣೀಯವಾಗಿದೆ.

ನೂತನ ಫೋರ್ಡ್ ಫಿಯೆಸ್ಟಾ 1.5 ಲೀಟರ್ ಟಿಐ-ವಿಸಿಟಿ (Ti-VCT) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 108 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಪೆಟ್ರೋಲ್ ಎಂಜಿನ್ 6 ಸ್ಪೀಡ್ ಆಟೋ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜತೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

2014 ಫಿಯೆಸ್ಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಆಗಮನವಾಗಲಿದೆ. ಇದರ 1.5 ಲೀಟರ್ ಟಿಡಿಸಿಐ (TDCi) ಡೀಸೆಲ್ ಎಂಜಿನ್ 89 ಅಶ್ವಶಕ್ತಿ (204 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಆಟೋಮ್ಯಾಟಿಕ್ ಜತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

Ford Fiesta 2014

ಇನ್ನು 2014 ಫೋರ್ಡ್ ಫಿಯೆಸ್ಟಾದಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಮುಂದಿನ ಸವಾರರಿಗೆ ಎಬಿಎಸ್, ಇಬಿಡಿ ಜತೆಗೆ ಡ್ಯುಯಲ್ ಏರ್ ಬ್ಯಾಗ್ ನಿರೀಕ್ಷೆ ಮಾಡಬಹುದಾಗಿದೆ. ಹಾಗೆಯೇ ಫೋರ್ಡ್‌ನ ಸಿಂಕ್ (SYNC) ತಂತ್ರಜ್ಞಾನ, ಎಮರ್ಜನ್ಸಿ ಅಸಿಸ್ಟ್, ಎಂಜಿನ್ ಸ್ಟಾರ್ಟ್/ಸ್ಟಾಪ್‌ಗಳಂತಹ ಸೌಲಭ್ಯಗಳು ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

ಅಂತಿಮವಾಗಿ ಹೋಂಡಾ ಸಿಟಿ ಹಾಗೂ ಇನ್ನಷ್ಟೇ ಆಗಮನವಾಗಲಿರುವ ಸುಜುಕಿ ಸಿಯಾಜ್ ಪೈಪೋಟಿಯ ದೃಷ್ಟಿಕೋನದಲ್ಲಿ ಈ ಹಂತದಲ್ಲಿ ಫೋರ್ಡ್ ಫಿಯೆಸ್ಟಾ ಫೇಸ್‌ಲಿಫ್ಟ್ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಈ ನಿಟ್ಟಿನಲ್ಲಿ ಫೋರ್ಡ್ ಯೋಜನಾತ್ಮಕ ಹೆಜ್ಜೆಯನ್ನಿಟ್ಟಿದೆ ಅಂದರೆ ತಪ್ಪಾಗಲಾರದು.

More from DriveSpark

Article Published On: Monday, May 19, 2014, 12:04 [IST]
English summary
Ford had revealed that there would be a facelifted version of their Fiesta in 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+