ಪ್ರೋತ್ಸಾಹಧನಕ್ಕೆ ಕತ್ತರಿ; ಫೋರ್ಡ್ ಕಾರ್ಮಿಕರು ಅಸಂತೃಪ್ತಿ

By Nagaraja

ಬೆಂಗಳೂರಿನ ಬಿಡದಿಯಲ್ಲಿರುವ ಟೊಯೊಟಾ ಕಿರ್ಲೊಸ್ಕರ್ ಘಟಕದಲ್ಲಿ ಕಂಡುಬಂದಿರುವ ಬಿಕ್ಕಿಟ್ಟಿನ ಬೆನ್ನಲ್ಲೇ ಚೆನ್ನೈನಲ್ಲಿರುವ ಫೋರ್ಡ್ ಘಟಕದಲ್ಲೂ ಕಾರ್ಮಿಕರ ಅಸಂತೃಪ್ತಿ ಭುಗಿಲೆದ್ದಿದೆ. ಬೆಂಗಳೂರಿನಲ್ಲಿ ವೇತನ ಪರಿಷ್ಕರಣೆ ಸಂಬಂಧ ಕಾರ್ಮಿಕರು ಮುಷ್ಕರ ಹೂಡಿದ್ದರೆ ಚೆನ್ನೈನಲ್ಲಿ ಫೋರ್ಡ್ ಸೇವೆಗಳಿಗೆ ಬಹಿಷ್ಕಾರ ಹೂಡುವ ಮೂಲಕ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ.

ಚೆನ್ನೈನ ಮರೈಮಲೈ ನಗರದಲ್ಲಿ ಸ್ಥಿತಗೊಂಡಿರುವ ಫೋರ್ಡ್ ಇಂಡಿಯಾ ಘಟಕದಲ್ಲಿ ಇಂತಹದೊಂದು ಸಮಸ್ಯೆ ತಲೆದೋರಿದೆ. ಹಾಗಿದ್ದರೂ ಉತ್ಪನ್ನ ಪ್ರಕ್ರಿಯೆಗೆ ಯಾವ ತೊಂದರೆಯಾಗದಂತೆ ಎಚ್ಚರ ವಹಿಸುತ್ತಿರುವ ಕೆಲಸಗಾರರು, ಸಂಸ್ಥೆಯ ಉಪಹಾರ ಮಂದಿರದಿಂದ ದೊರಕುವ ಆಹಾರ ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ಅಸಂತೋಷ ವ್ಯಕ್ತಪಡಸುತ್ತಿದ್ದಾರೆ.

Ford India

ವರದಿಗಳ ಪ್ರಕಾರ ಪೋರ್ಡ್ ಕಾರ್ಯಾಧರಿತ ಪ್ರೋತ್ಸಾಹಧನದಲ್ಲಿ ಕತ್ತರಿ ಪ್ರಯೋಗ ಮಾಡಿರುವುದು 1,800ರಷ್ಟು ಕೆಲಸಗಾರರ ಅಸಂತೋಷಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಫೋರ್ಡ್ ಕಾರ್ಯಾಧರಿತ ಪ್ರೋತ್ಸಾಹಧನದಲ್ಲಿ ಶೇಕಡಾ 10ರಷ್ಟು ಇಳಿಕೆ ಕಂಡುಬಂದಿದೆ.

2012ನೇ ಸಾಲಿನಲ್ಲಿ 1.03 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುತ್ತಿದ್ದ ಫೋರ್ಡ್ ಚೆನ್ನೈ ಘಟಕದಲ್ಲಿ 2013ರಲ್ಲಿ 1.22 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸಲಾಗಿದೆ. ಹಾಗಿದ್ದರೂ ಕಾರ್ಯಾಧರಿತ ಪ್ರೋತ್ಸಾಹ ಧನ ಶೇಕಡಾ 26ರಿಂದ 15.8ಕ್ಕೆ ಇಳಿಕೆಗೊಳಿಸಲಾಗಿದೆ.

1995ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಫೋರ್ಡ್ ಚೆನ್ನೈ ಘಟಕದಲ್ಲಿ ಇದೀಗ 6,000ದಷ್ಟು ಕೆಲಸಗಾರರಿದ್ದು, ಫೋರ್ಡ್ ಇಕೊಸ್ಪೋರ್ಟ್, ಫಿಗೊ ಹಾಗೂ ಫಿಯೆಸ್ಟಾಗಳಂತಹ ಆವೃತ್ತಿಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಘಟಕದಿಂದಲೇ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ 40 ರಾಷ್ಟ್ರಗಳಿಗೆ ರಫ್ತಾಗುತ್ತಿದೆ.

Article Published On: Tuesday, March 25, 2014, 15:53 [IST]
English summary
Even as the workers at Toyota Kirloskar are refusing to come back to work over salary issues, another employer-employee issue has cropped up at another automobile manufacturing facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+