ಫೋರ್ಡ್ ಇನ್ನೋವೇಟ್ ಮೊಬಿಲಿಟಿ ಚಾಲೆಂಜ್ ಸಿರೀಸ್
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಸಂಸ್ಥೆಯು, ವಿಶ್ವದ ಎಂಟು ಪ್ರದೇಶಗಳಲ್ಲಿ 'ಇನ್ನೋವೇಟ್ ಮೊಬಿಲಿಟಿ ಚಾಲೆಂಜ್ ಸಿರೀಸ್' ಆರಂಭಿಸಿದೆ.
ಭಾರತದಲ್ಲಿ ಚೆನ್ನೈ, ದೆಹಲಿ ಹಾಗೂ ಮುಂಬೈನಲ್ಲಿ ಫೋರ್ಡ್ ಇನ್ನೋವೇಟ್ ಮೊಬಿಲಿಟಿ ಚಾಲೆಂಜ್ ಸಿರೀಸ್ ನಡೆಯಲಿದೆ. ಉಳಿದಂತೆ ಪೋರ್ಚುಗಲ್‌ನ ಲಿಸ್ಬನ್, ಅಮೆರಿಕದ ಲಾಸ್ ಏಂಜಲೀಸ್, ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಚೀನಾದ ಶಾಂಘೈ ಮತ್ತು ಅರ್ಜೈಂಟೀನಾದಲ್ಲಿ ನಡೆಯಲಿದೆ.

2014 ಜುಲೈ 15ರಂದು ಆರಂಭವಾಗಿರುವ ಈ ಸಿರೀಸ್ ಸ್ಥಳೀಯ ಶೇರುದಾರರನ್ನು ಸಮೀಪಿಸುವ ಇರಾದೆಯನ್ನು ಫೋರ್ಡ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ಉಪಾಧ್ಯಕ್ಷರಾಗಿರುವ ಪೌಲ್ ಮಸ್ಕರೇನಾಸ್ ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಅವರು, "ಜಗತ್ತಿನ ಎಂಟು ಕಡೆಗಳಲ್ಲಿ ಯೋಜನೆ ಆರಂಭಿಸುವ ಮೂಲಕ ಜಾಗತಿಕ ಹಾಗೂ ಸ್ಥಳೀಯ ಭಾಗಿಧಾರರು ಪಾಲ್ಗೊಳ್ಳಲಿದ್ದು, ಇದು ಭವಿಷ್ಯದ ಹೆಚ್ಚು ಚುರುಕಾದ ಮತ್ತು ದಕ್ಷ ಸಾರಿಗೆ ಜಾಲದ ಗುರಿ ತಲುಪಲು ನೆರವಾಗಲಿದೆ" ಎಂದಿದ್ದಾರೆ.
ಫೋರ್ಡ್ ಇನ್ನೋವೇಟ್ ಮೊಬಿಲಿಟಿ ಚಾಲೆಂಜ್ ಸಿರೀಸ್‌ನಲ್ಲಿ ವಿಜೇತರಿಗೆ 30,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿರಿ.


Click it and Unblock the Notifications