ಫೋರ್ಡ್ ಫಿಯೆಸ್ಟ್ ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಲಾಂಚ್!
ಬಹುನಿರೀಕ್ಷಿತ ಫೋರ್ಡ್ ಫಿಯೆಸ್ಟ್ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಫೋರ್ಡ್ ಫಿಯೆಸ್ಟಾ ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಬಿಡುಗಡೆಯಾಗಲಿದೆ.
ಭಾರತ ಮಾರುಕಟ್ಟೆಯ ಸಾಮರ್ಥ್ಯವನ್ನು ಅರಿತುಕೊಂಡಿರುವ ಫೋರ್ಡ್ ಏಷಿಯಾ ಫೆಸಿಫಿಕ್ ಅಧ್ಯಕ್ಷ ಡೇವಿಡ್ ಸ್ಕಾಚ್, ಇತ್ತ ಗಮನ ಕೇಂದ್ರಿಕರಿಸಿದ್ದಾರೆ. ಅಲ್ಲದೆ ಮುಂದಿನ ವರ್ಷಗಳಲ್ಲಿ ಘಟಕ ತೆರೆಯುವ ಯೋಜನೆಯನ್ನು ಹೊಂದಿದ್ದಾರೆ.

ಸದ್ಯ ಬಂದಿರುವ ವರದಿಗಳ ಪ್ರಕಾರ 2014 ಫೋರ್ಡ್ ಫಿಯೆಸ್ಟಾ, ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಹಾಗೆಯೇ ಪೆಟ್ರೋಲ್ ಎಂಜಿನ್ ಸದ್ಯಕ್ಕೆ ಪರಿಚಯವಾಗುವುದಿಲ್ಲ. ಇದು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
2014 ಫಿಯೆಸ್ಟಾ ಕಾರಿನಲ್ಲಿ 1.5 ಡೀಸಲ್ ಎಂಜಿನ್ ಆಳವಡಿಕೆಯಾಗಲಿದೆ. ಇದು 90 ಪಿಎಸ್ ಪವರ್ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಆದರೆ ಪೆಟ್ರೋಲ್ ಎಂಜಿನ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.
ಇನ್ನು ಆಕ್ರಮಣಕಾರಿ ವಿನ್ಯಾಸದ ಜೊತೆಗೆ ಗುಟಮಟ್ಟದ ಉತ್ಪನ್ನಕ್ಕೆ ಫೋರ್ಡ್ ಹೆಚ್ಚಿನ ಆದ್ಯತೆ ಕೊಟ್ಟಿದೆ. ಹಾಗಿದ್ದರೂ ಇದುವರೆಗೆ ದರದ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.


Click it and Unblock the Notifications








