ವರ್ಷಾಂತ್ಯದಲ್ಲಿ ಹೊಸ ಫೋರ್ಡ್ ಫಿಗೊ ಎಂಟ್ರಿ

Written By:

ಫೋರ್ಡ್ ಫಿಗೊ ದೇಶದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಇದರ ಸ್ಟೈಲಿಷ್ ನೋಟ ಎಲ್ಲ ವಿಭಾಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಅಂದ ಹಾಗೆ ಫೋರ್ಡ್ ತನ್ನ ಮೊದಲ ಫಿಗೊ ಮಾದರಿಯನ್ನು ನಾಲ್ಕು ವರ್ಷಗಳ ಹಿಂದೆ ಅಂದರೆ 2010ರಲ್ಲಿ ಬಿಡುಗಡೆಗೊಳಿಸಿತ್ತು. ಚೆನ್ನೈ ಘಟಕದಲ್ಲಿ ನಿರ್ಮಾಣವಾದ ಫಿಗೊ ಹ್ಯಾಚ್‌ಬ್ಯಾಕ್ ಆವೃತ್ತಿಯು ಫೋರ್ಡ್ ಪೈಕಿ ಅತಿ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

To Follow DriveSpark On Facebook, Click The Like Button

ಬಳಿಕ ಕೆಲವು ತಿಂಗಳುಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಸಾಗಿದ 2014 ಆಟೋ ಎಕ್ಸ್ ಪೋದಲ್ಲಿ ಹೊಸ ಫಿಗೊ ಆವೃತ್ತಿಯನ್ನು ಪರಿಚಯಿಸಿತ್ತು. ಆದರೆ ಇದು ಹ್ಯಾಚ್‌ಬ್ಯಾಕ್ ಕಾರಲ್ಲ. ಬದಲಾಗಿ ಆಕರ್ಷಕ ಸೆಡಾನ್ ಕಾರಾಗಿರಲಿದೆ. ಅಂದರೆ ಇನ್ನು ಮುಂದೆ ಫಿಗೊ ಹೆಸರಲ್ಲಿ ಎರಡು ಮಾದರಿಗಳು ಮಾರಾಟವಾಗಲಿದೆ.

ವರದಿಗಳ ಪ್ರಕಾರ ಮೊದಲು 2014 ಫೋರ್ಡ್ ಫಿಗೊ ದೇಶದಲ್ಲಿ ಲಾಂಚ್ ಆಗಲಿದೆ. ಇದನ್ನು ಫಿಗೊ ಕಾಂಪಾಕ್ಟ್ ಸೆಡಾನ್ ಹಿಂಬಾಲಿಸಲಿದೆ ಎಂಬ ಮಾಹಿತಿಯಿದೆ. ಇದು 1.0 ಲೀಟರ್ ಇಕೊನೇಟಿಕ್ ಎಂಜಿನ್‌ನಿಂದ (85 ಅಶ್ವಶಕ್ತಿ) ನಿಯಂತ್ರಿಸಲ್ಪಡಲಿದ್ದು, ಟಿ ವಿಸಿಟಿ ಸಿಸ್ಟಂ ಕೂಡಾ ಹೊಂದಿರಲಿದೆ. ಹಾಗೆಯೇ 1.5 ಲೀಟರ್ ಎಂಜಿನ್ ಕೂಡಾ ಪಡೆಯುವ ಸಾಧ್ಯತೆಯಿದೆ.

Ford
English summary
Ford got their first Figo hatchback to India in 2010. The car has been manufactured at their Chennai plant and has been the best seller for the American brand.
Story first published: Wednesday, May 21, 2014, 11:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark