ಫೋರ್ಡ್‌ನಿಂದ ಹ್ಯಾಪಿ ಸ್ಕೂಲ್ಸ್ ಕಾರ್ಯಕ್ರಮ ಪ್ರಾರಂಭ
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಭಾರತದಲ್ಲಿ ವಿನೂತನ ಹ್ಯಾಪಿ ಸ್ಕೂಲ್ಸ್ ಪ್ರೋಗ್ರಾಂ ಆರಂಭಿಸಿದೆ.
ವಾಹನ ತಯಾರಿಕ ಸಂಸ್ಥೆ ಆಗಿರುವ ಹೊರತಾಗಿಯೂ ತನ್ನ ಸಾಮಾಜಿಕ ಜವಾಬ್ದಾರಿ ಅರಿತುಕೊಂಡಿರುವ 2014 ಸೆಪ್ಟೆಂಬರ್ 05ರ ಶಿಕ್ಷಕರ ದಿನದಂದೇ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವುದು ಫೋರ್ಡ್ ಸಂಸ್ಥೆಯ ಧ್ಯೇಯವಾಗಿದೆ. ಚೆನ್ನೈ ಸಿಎಸ್‌ಐ ಹೈ ಸ್ಕೂಲ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಫೋರ್ಡ್ ಇಂಡಿಯಾ ಅಧ್ಯಕ್ಷರಾಗಿರುವ ನಿಗೆಲ್ ಹ್ಯಾರಿಸ್, ಗ್ಲೋಬರ್ ವೀಕ್ ಆಫ್ ಕೇರಿಂಗ್ ಇದಕ್ಕೊಂದು ಉತ್ತಮ ಉದಾಹರಣೆಯಾಗಿದ್ದು, ಉತ್ತಮ ಸಮಾಜ ಬೆಳೆಸುವಲ್ಲಿ ಸದಾ ಬದ್ಧವಾಗಿದೆ ಎಂದಿದ್ದಾರೆ.
ಉತ್ತಮ ನಾಳಿಗಾಗಿ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. 2014 ಗ್ಲೋಬಲ್ ವೀಕ್ ಆಫ್ ಕೇರಿಂಗ್ ಭಾಗವಾಗಿ ಹ್ಯಾಪಿ ಸ್ಕೂಲ್ಸ್ ಪ್ರೋಗ್ರಾಂ ಆಯೋಜನೆಯಾಗುತ್ತಿದೆ. ಭಾರತದಲ್ಲಿದ್ದು ಒಂಬತ್ತನೇ ಅವತರಣಿಕೆಯಾಗಿದೆ.

ಪ್ರಸ್ತುತ ಫೋರ್ಡ್ ಕಾರ್ಯಕ್ರಮವು 21 ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನವಾಗಲಿದೆ. ಚೆನ್ನೈ ಜೊತೆಗೆ ಗುಜರಾತ್ ಮತ್ತು ಹರಿಯಾಣದಲ್ಲೂ ಫೋರ್ಡ್ ಈ ಯೋಜನೆ ಜಾರಿಯಾಗಲಿದೆ.


Click it and Unblock the Notifications