ಫಾರ್ಚ್ಯುನರ್ ಸ್ಪರ್ಧಿ ಫೋರ್ಡ್ ಎಂಡೀವರ್ 2015ರಲ್ಲಿ ಭಾರತಕ್ಕೆ
ಹೆಚ್ಚಿನ ಸಾಮರ್ಥ್ಯದ, ತಾಂತ್ರಿಕವಾಗಿ ಮುಂದುವರಿದ, ಸುರಕ್ಷಿತ ಹಾಗೂ ಗರಿಷ್ಠ ಇಂಧನ ಕ್ಷಮತೆಯನ್ನು ನೀಡುವ ಕ್ರೀಡಾ ಬಳಕೆಯ ವಾಹನಗಳಲ್ಲಿ (ಎಸ್‌ಯುವಿ) ಒಂದಾಗಿರುವ ಫೋರ್ಡ್ ಎಂಡೀವರ್, ಹೊಸ ರೂಪವನ್ನು ಪಡೆದುಕೊಳ್ಳಲಿದೆ.
ವರದಿಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿರುವ ಹೊಸ ಫೋರ್ಡ್ ಎಂಡೀವರ್ 2015ರಲ್ಲಿ ಭಾರತ ಹಾಗೂ ಏಷ್ಯಾ ಖಂಡಗಳನ್ನು ತಲುಪಲಿದೆ. ಆದರೆ ಕೆಲವು ನಿರ್ದಿಷ್ಟ ಜಾಗತಿಕ ಮಾರುಕಟ್ಟೆಯಲ್ಲಿ ಇದು 'ಎವೆರೆಸ್ಟ್' ಎಂದು ಗುರುತಿಸಿಕೊಳ್ಳಲಿದೆ.

ಅಮೆರಿಕ ವಾಹನ ತಯಾರಿಕ ಸಂಸ್ಥೆಯು ಹೊಸ ಫೋರ್ಡ್ ಎವರೆಸ್ಟ್ ಮಾದರಿಯನ್ನು 2013ರಲ್ಲಿ ಮೊದಲ ಬಾರಿಗೆ ಸಿಡ್ನಿಯಲ್ಲಿ ಪ್ರದರ್ಶನಕ್ಕಿರಿಸಿತ್ತು. ಬಳಿಕ 2014 ಬ್ಯಾಂಕಾಂಕ್ ಮೋಟಾರು ಶೋದಲ್ಲಿ ಈ ಬಹುನಿರೀಕ್ಷಿತ ಎಸ್‌ಯುವಿ ಕೆಲವೊಂದು ಬದಲಾವಣೆಗಳೊಂದಿಗೆ ಅನಾವರಣಗೊಂಡಿದೆ.
ಭಾರತ ಮಾದರಿಯಲ್ಲೂ ಇದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಹೊಂದಿರುವ ಸಾಧ್ಯತೆಯಿದೆ. ಇದು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ 2.5 ಹಾಗೂ 3.0 ಲೀಟರ್ ಎಂಜಿನ್ ಆಳವಡಿಸಲಾಗುವುದು. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಿರಲಿದೆ.

ಹಿಂದಿನ ಮಾದರಿಗಿಂತಲೂ 2015 ಎಂಡೀವರ್ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಸಿಂಕ್2 (SYNC2 ) ಮಲ್ಟಿಮೀಡಿಯಾ ಸಿಸ್ಟಂ ಜೊತೆ ಎಂಟು ಇಂಚಿನ ಮಾಹಿತಿ ಮನರಂಜನಾ ವ್ಯವಸ್ಥೆ ಹೊಂದಿರಲಿದೆ.
2015 ಭಾರತದಲ್ಲಿ ತಲುಪಲಿರುವ ಎಂಡೀವರ್ 20 ರಿಂದ 30 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಹಾಗಿದ್ದರೂ ಇದನ್ನು ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುಲಾಗುತ್ತದೆಯೇ ಅಥವಾ ಆಮದು ಮಾಡಲಾಗುತ್ತಿದೆಯೇ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಇದು ಟೊಯೊಟಾ ಫಾರ್ಚ್ಯುನರ್ ಮತ್ತು ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications








