ಫ್ರಾನ್ಸ್‌ನಲ್ಲಿ ಡೀಸೆಲ್ ಗಾಡಿಗಳಿಗೆ ನಿಷೇಧ?

By Nagaraja

ಮಹತ್ವದ ಬೆಳವಣಿಗೆಯೊಂದರಲ್ಲಿ ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಫ್ರಾನ್ಸ್ ಯೋಜನೆ ಹಮ್ಮಿಕೊಂಡಿದೆ.

ಪರಿಸರಕ್ಕೆ ಹಾನಿಕಾರಕವಾಗಿ ಪರಿಣಮಿಸಿರುವ ಇಂಧನ ಚಾಲಿತ ವಾಹನಗಳನ್ನು ನಿಧಾನವಾಗಿ ರಸ್ತೆ ಕೆಳಗಿಳಿಸುವುದು ಈ ಯುರೋಪ್ ರಾಷ್ಟ್ರದ ಗುರಿಯಾಗಿದೆ.

diesel

ಈ ನಿಟ್ಟಿನಲ್ಲಿ ಮುಂದಿನ ವರ್ಷ ಕಾರು ಗುರುತಿನ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ಮೂಲಕ ಅತಿ ಹೆಚ್ಚು ಪರಿಸರ ಮಾಲಿನ್ಯ ಮಾಡುವ ವಾಹನಗಳನ್ನು ಗುರಿತಿಸಿಕೊಂಡು ನಿಷೇಧ ಹೇರಲಿದೆ.

ಇದರೊಂದಿಗೆ ನಗರದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಲಿದೆ. ಫ್ರಾನ್ಸ್‌ನಲ್ಲಿ ಶೇ. 80ರಷ್ಟು ಸವಾರರು ಡೀಸೆಲ್ ವಾಹನಗಳನ್ನು ಆಶ್ರಯಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಏತನ್ಮಧ್ಯೆ "ಟಿಐಸಿಪಿಇ" ಎಂಬ ಹೊಸ ಅಬಕಾರಿ ತೆರಿಗೆ ಜಾರಿಗೆ ಯೋಜನೆಯನ್ನು ಫ್ರಾನ್ಸ್ ಸರಕಾರ ಹೊರ ತರುತ್ತಿದೆ. ಅಂತೆಯೇ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಲಾಗುವುದು.

Article Published On: Wednesday, December 3, 2014, 11:12 [IST]
English summary
France, the European country is looking forward to slowly phase out diesel powered passenger cars. The country will set up a system to identify the vehicles that pollute the most.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+