ಕ್ರೂಜ್ ಸೆಡಾನ್‌ಗೆ ಹಿಂದಕ್ಕೆ ಕರೆ; ಸಮಸ್ಯೆ ಏನಪ್ಪಾ?

By Nagaraja

ಒಂದೆಡೆ 'ಷೆವರ್ಲೆ ಬ್ಲಾಕ್‌ಬಸ್ಟರ್' ಆಕರ್ಷಕ ಡಿಸೆಂಬರ್ ಆಫರುಗಳ ಮೇಳವನ್ನು ಘೋಷಣೆ ಮಾಡಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ಇನ್ನೊಂದೆಡೆ ದೇಶದಲ್ಲಿ ಕ್ರೂಜ್ ಸೆಡಾನ್ ಕಾರಿಗೆ ಹಿಂದಕ್ಕೆ ಕರೆ ನೀಡಿದೆ.

ಎಂಜಿನ್ ಭಾಗದಲ್ಲಿ ವೈರ್‌ಗಳಿರುವ ಪಿವಿಸಿ ಬ್ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಸದ್ದಿಲ್ಲದೆ ಸಂಸ್ಥೆಯು ಹಿಂದಕ್ಕೆ ಕರೆ ನೀಡಿದೆ.


ಇದೀಗ ಸಂಪೂರ್ಣವಾಗಿ ಉಚಿತವಾಗಿ ಸಮಸ್ಯೆ ಬಗೆ ಹರಿಸಲಿರುವ ಸಂಸ್ಥೆಯು ಈ ಬಗ್ಗೆ ಮಾಲಿಕರ ಸಂಪರ್ಕದಲ್ಲಿದೆ. ಅಲ್ಲದೆ ಎರಡು ತಾಸಿನೊಳಗೆ ತೊಂದರೆ ಸರಿಪಡಿಸಿಕೊಡಲಾಗುವುದು.

2013ರಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯು, ಸೈಲ್ ಯು-ವಿಎ ಹಾಗೂ ತವೆರಾ ಮಾದರಿಯನ್ನು ಹಿಂಪಡೆದಿತ್ತು. ಹಾಗಿದ್ದರೂ ಎಷ್ಟು ಕ್ರೂಜ್ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ ಎಂಬುದು ತಿಳಿದು ಬಂದಿಲ್ಲ.

chevrolet cruze

ಪ್ರಸಕ್ತ ತಿಂಗಳಲ್ಲಿ ಸರಾಸರಿ 130 ಕ್ರೂಜ್ ಯುನಿಟ್‌ಗಳು ಮಾರಾಟವಾಗುತ್ತಿದೆ. ಇದು ಪ್ರತಿಸ್ಪರ್ಧಿಗಳನ್ನು ಗಮನಿಸಿದಾಗ ತುಂಬಾನೇ ಕಡಿಮೆಯಾಗಿದೆ.

ಅಂದ ಹಾಗೆ ಭಾರತದಲ್ಲಿ ಕ್ರೂಜ್ ಡೀಸೆಲ್ ಮಾದರಿಯಲ್ಲಿ ಮಾತ್ರ ಮಾರಾಟವಾಗಿದೆ. ಇದು 2.0 ಲೀಟರ್ ಇನ್ ಲೈನ್ ಫೋರ್ ಎಂಜಿನ್ ಪಡೆದುಕೊಳ್ಳಲಿದ್ದು, 166 ಅಶ್ವಶಕ್ತಿ (380 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಜೊತೆಗೆ 6 ಸ್ಪೀಡ್ ಆಟೋ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ರೆನೊ ಫ್ಲೂಯನ್ಸ್, ಫೋಕ್ಸ್‌ವ್ಯಾಗನ್ ಜೆಟ್ಟಾ ಹಾಗೂ ಸ್ಕೋಡಾ ಒಕ್ಟಾವಿಯಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಕ್ರೂಜ್ ಸೆಡಾನ್ ಕಾರಿನ ದೆಹಲಿ ಎಕ್ಸ್ ಶೋ ಬೆಲೆ 13.80 ಲಕ್ಷ ರು.ಗಳಿಂದ 16.30 ಲಕ್ಷ ರು.ಗಳಿಷ್ಟಿದೆ.

More from DriveSpark

Article Published On: Saturday, December 6, 2014, 12:29 [IST]
English summary
General Motors had recently introduced a facelift to their Cruze sedan in India. The manufacturer now has issued a silent recall of their sedan. They claim there is an issue with a PVC bracket that keeps the wire in place within the engine area.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+