ಹೊಸ ವರ್ಷದಿಂದ ದುಬಾರಿಯಾಗಲಿದೆ ಷೆವರ್ಲೆ ಕಾರು

By Nagaraja

ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಐಕಾನಿಕ್ ಬ್ರಾಂಡ್ ಆಗಿರುವ ಷೆವರ್ಲೆ ಕಾರುಗಳು ಹೊಸ ವರ್ಷದಿಂದ ದುಬಾರಿಯಾಗಲಿದೆ. ಇದು ಹೊಸ ವರ್ಷದಲ್ಲಿ ವಾಹನ ಖರೀದಿಸುವವರಿಗೆ ಕಹಿ ತುತ್ತಾಗಿ ಪರಿಣಮಿಸುವ ಭೀತಿಯಿದೆ.

ವಾಹನಗಳ ಮೇಲಿನ ಅಬಕಾರಿ ಸುಂಕ ರಿಯಾಯಿತಿಯನ್ನು ಡಿಸೆಂಬರ್ ತಿಂಗಳ ವರೆಗೆ ಕೇಂದ್ರ ಸರಕಾರ ಮುಂದುವರಿಸಿತ್ತು. ಇದೀಗ ತಿಂಗಳಾಂತ್ಯದಲ್ಲಿ ಅಬಕಾರಿ ಸುಂಕ ನೀತಿಯನ್ನು ಸರಕಾರ ನವೀಕರಿಸಲಿದೆಯೇ ಅಥವಾ ಹಳೆಯ ನೀತಿಯನ್ನು ಮುಂದುವರಿಸಿಕೊಂಡು ಹೋಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


ಈ ನಡುವೆ ಹೆಚ್ಚುತ್ತಿರುವ ನಿರ್ಮಾಣ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ತನ್ನೆಲ್ಲ ಮಾದರಿಗಳಿಗೆ 5,000 ರು.ಗಳಿಂದ 20,000 ರು.ಗಳ ವರೆಗೆ ಬೆಲೆ ಏರಿಕೆ ಮಾಡಲು ಜನರಲ್ ಮೋಟಾರ್ಸ್ ನಿರ್ಧರಿಸಿದೆ. ಈ ದರವು 2015 ಜನವರಿ ತಿಂಗಳಿನಿಂದಲೇ ಅನ್ವಯವಾಗಲಿದೆ.

ಪ್ರಸ್ತುತ ಅಮೆರಿಕ ಮೂಲದ ಸಂಸ್ಥೆಯು ಭಾರತದಲ್ಲಿ ಎಂಟು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ ಸ್ಪಾರ್ಕ್, ಬೀಟ್, ಸೈಲ್ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್, ಕ್ರೂಜ್ ಸೆಡಾನ್, ಎಂಜಾಯ್ ಮತ್ತು ತವೆರಾ ಎಂಪಿವಿ ಹಾಗೂ ಕಾಪ್ಟಿವಾ ಎಸ್‌ಯುವಿಗಳಾಗಿವೆ.

chevrolet captiva

ಇವೆಲ್ಲದರ ಬೆಲೆಯು 3.45 ಲಕ್ಷ ರು.ಗಳಿಂದ ಆರಂಭವಾಗಿ ಗರಿಷ್ಠ 25.85 ಲಕ್ಷ ರು.ಗಳ (ಎಕ್ಸ್ ಶೋ ರೂಂ ದೆಹಲಿ) ವರೆಗೆ ದುಬಾರಿಯೆನಿಸಿದೆ.

More from DriveSpark

Article Published On: Tuesday, December 9, 2014, 11:47 [IST]
English summary
General Motors had recently recalled their Cruze sedan, which is being sold in India. The issue with the sedan was a faulty PVC pipe in the engine bay. They plan to introduce several new products in the coming year as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+