ಮೈಲೇಜ್ ಹೆಚ್ಚಿಸಲು ಬರಲಿದೆ ಹೊಸ ನಿಯಮ
ಭಾರತೀಯ ವಾಹನೋದ್ಯಮದ ನೂತನ ಮೈಲುಗಲ್ಲೇ ಎಂದೇ ವಿಶ್ಲೇಷಿಸಬಹುದಾದ ವಿಚಾರವೊಂದರಲ್ಲಿ ದೇಶದ ಪ್ರಯಾಣಿಕ ಕಾರುಗಳ ಇಂಧನ ಕ್ಷಮತೆ ಹೆಚ್ಚಿಸಲು ಕೇಂದ್ರ ಸರಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವ ಯೋಚನೆಯಲ್ಲಿದೆ.
ಇಂತಹದೊಂದು ಮಹತ್ತರ ಪ್ರಸ್ತಾವನೆಯೊಂದಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಮುಂದೆ ಬಂದಿದ್ದು, 2016-17ರ ವೇಳೆಗೆ ಪ್ರಯಾಣಿಕ ಕಾರುಗಳ ಮೈಲೇಜ್ ಅನ್ನು ಶೇಕಡಾ 14ರಷ್ಟು ಹೆಚ್ಚಿಸಲು ಹಾಗೆಯೇ ಐದು ವರ್ಷಗಳ ಬಳಿಕ ಶೇಕಡಾ 38ರಷ್ಟು ಹೆಚ್ಚಿಸಲು ಯೋಜನೆ ಹೊಂದಿದೆ.

ಅಂದರೆ ಆಟೋ ಮೂಲಗಳ ಪ್ರಕಾರ 2016-17ರ ವೇಳೆಗೆ ಪ್ರತಿ ಲೀಟರ್‌ಗೆ 18.2 ಕೀ.ಮೀ. ವರೆಗೂ ಅದೇ ರೀತಿ 2021-22ರ ವೇಳೆಗೆ ಪ್ರತಿ ಲೀಟರ್‌ಗೆ 22 ಕೀ.ಮೀ. ವರೆಗೂ ಇಂಧನ ದಕ್ಷತೆ ಹೆಚ್ಚಾಗಲಿದೆ. ಪ್ರಸ್ತುತ ಮೈಲೇಜ್ ಲೀಟರ್‌ಗೆ 16 ಕೀ.ಮೀ. ಗಳಿಷ್ಟಿದೆ.
ಹಾಗೊಂದು ವೇಳೆ ತಯಾರಕರು ಇದನ್ನು ಜಾರಿಗೆ ತರದಿದ್ದಲ್ಲಿ ಭಾರಿ ದಂಡವನ್ನು ವಿಧಿಸಲಾಗುವುದು. ಪ್ರಸ್ತುತ ನಿಯಮ ಜಾರಿಗೆ ಬಂದ್ದಲ್ಲಿ ಭಾರತ ಕೂಡಾ ಅಮೆರಿಕ, ಜರ್ಮನಿ, ಜಪಾನ್ ಮತ್ತು ಚೀನಾ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಮೇಲೆ ತಿಳಿಸಲಾದ ರಾಷ್ಟ್ರಗಳಲ್ಲಿ ಇಂಧನ ದಕ್ಷತೆ ಹಾಗೂ ಎಮಿಷನ್‌ಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ.

ಪ್ರಸ್ತಾವಿತ ಯೋಜನೆಯು ಕಾರ್ಪೋರೇಟ್ ಅವರೇಜ್ ಪ್ಯೂಯಲ್ ಕನ್ಸಮ್ಷನ್ (ಸಿಎಎಫ್‌ಸಿ) ಎಂದರಿಯಲ್ಪಡಲಿದೆ. ಇದು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಎಲ್ಲ ರೀತಿಯ ವಾಹನಗಳಿಗೂ ಅನ್ವಾಯವಾಗಲಿದೆ. ಅಂದ ಹಾಗೆ ವಾಹನಗಳ ಭಾರದ ಆಧಾರದಲ್ಲಿ ಇಂಧನ ಕ್ಷಮತೆಯು ನಿಗದಿಯಾಗಲಿದೆ. ಇದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಎಂಟು ವಿಧಧ ಭಾರ ವಿಭಾಗವನ್ನು ಉಂಟು ಮಾಡಲಿದೆ. ಹಾಗೆಯೇ ವಾಹನಗಳ ಮೈಲೇಜ್ ಆಧಾರದಲ್ಲಿ ಸ್ಟಾರ್ ರೇಟಿಂಗ್ ಆಳವಡಿಸಲಾಗುವುದು.
ನೂತನ ಮೈಲೇಜ್ ನಿಯಮವು ಜಾರಿಗೆ ಬಂದ್ದಲ್ಲಿ 2015ರ ವೇಳೆಯಾಗುವಾಗ 20 ಮಿಲಿಯನ್ ಟನ್‌ಗಳಷ್ಟು ಇಂಧನ ಉಳಿತಾಯ ಮಾಡಲು ಸಾಧ್ಯವಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಮೈಲೇಜ್ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವಾಹನೋದ್ಯಮ ತಯಾರಕ ಒಕ್ಕೂಟವು (ಸಿಯಾಮ್), ಪ್ರಸ್ತುತ ನಿಯಮ ಜಾರಿಗೆ ತರುವುದು ಕಷ್ಟಕರ. ಅಲ್ಲದೆ ಇದು ವಾಹನಗಳ ದರ ಏರಿಕೆಗೂ ಕಾರಣವಾಗಲಿದೆ ಎಂದಿದೆ.
ಅಂದ ಹಾಗೆ ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ...


Click it and Unblock the Notifications








