2020ರಲ್ಲಿ ಜಗತ್ತಿನ ಅರ್ಧದಷ್ಟು ಕಾರುಗಳು ಮೇಡ್ ಇನ್ ಚೀನಾ
ಆರ್ಥಿಕವಾಗಿ ಚೀನಾ ಶರವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದು ಆ ದೇಶದ ವಾಹನೋದ್ಯಮದ ಮೇಲೂ ಪ್ರತಿಬಿಂಬಸಲಿದೆ ಎಂಬುದು ಸದ್ಯದ ಬ್ರೇಕಿಂಗ್ ನ್ಯೂಸ್.
ವರದಿಗಳ ಪ್ರಕಾರ ಆಟೋಮೊಬೈಲ್ ಕ್ಷೇತ್ರದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಚೀನಾ 2020ರ ವೇಳೆಯಾಗುವ ಜಗತ್ತಿನ ಒಟ್ಟು ಉತ್ಪಾದನೆಯ ಅರ್ಧದಷ್ಟು ಕಾರುಗಳು ಚೀನಾದಲ್ಲಿ ನಿರ್ಮಾಣವಾಗಲಿದೆ ಎಂದಿದೆ.

ಈಗಾಗಲೇ ಜಾಗತಿಕ ವಾಹನ ಮಾರುಕಟ್ಟೆಗಳು ಚೀನಾದತ್ತ ಗಮನ ಕೇಂದ್ರಿತವಾಗಿದೆ. ಇದರ ಬೆನ್ನಲ್ಲೇ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅನೇಕ ನಿರ್ಮಾಣ ಘಟಕಗಳು ತೆಲೆಯೆತ್ತಿವೆ.
ಪ್ರಸಕ್ತ ಜಾಗತಿಕವಾಗಿ ಒಟ್ಟು 87 ಮಿಲಿಯನ್ ಯುನಿಟ್ ಕಾರುಗಳು ಉತ್ಪಾದನೆಯಾಗುತ್ತಿದೆ. ಈ ಪೈಕಿ 22 ಮಿಲಿಯನ್ ವಾಹನಗಳು ಚೀನಾದಿಂದ ಮಾತ್ರ ತಯಾರಾಗುತ್ತಿದೆ ಎಂಬುದು ಬಿಸಿ ಬಿಸಿ ಸುದ್ದಿ. ಐಎಚ್‌ಎಸ್ ಆಟೋಮೋಟಿವ್ ಪ್ರಕಾರ ಈ ಪ್ರಮಾಣ 2021ರ ವೇಳೆಗೆ ಶೇ. 50ರಷ್ಟಾಗಲಿದೆ.
ಅಧ್ಯಯನ ವರದಿ ಪ್ರಕಾರ 2021ರಲ್ಲಿ ಜಾಗತಿಕವಾಗಿ 108 ಮಿಲಿಯನ್ ಯುನಿಟ್‌ಗಳು ಉತ್ಪಾದನೆಯಾಗಲಿದೆ. ಇದು ಆಟೋ ಬೆಳವಣಿಗೆಗಳನ್ನು ಗಮನಿಸಿದರೆ ಕ್ಷೀಣವಾಗಿದೆ. ಆದರೆ ಚೀನಾ ಏಕಮಾತ್ರವಾಗಿ 54 ಮಿಲಿಯನ್ ಯುನಿಟ್ ಉತ್ಪಾದಿಸಲಿದೆ. ಅಂದರೆ ಜಾಗತಿಕ ವಾಹನಗಳ ಉತ್ಪಾದನೆಯ ಶೇಕಡಾ 50ರಷ್ಟಾಗಿರಲಿದೆ ಎಂದಿದೆ.


Click it and Unblock the Notifications








