ಅಂಬಾಸಿಡರ್ ಬಿಡಿಭಾಗ ಲಭ್ಯತೆ ಸಮಸ್ಯೆಯಾದಿತೇ?

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹಾನ್ ಭಾಗವತ್ ಕಾರು ಅಪಘಾತವೊಂದರಿಂದ ಪಾರಾಗಿದ್ದರು. ಅದೃಷ್ಟವಶಾತ್ ಭಾಗವತ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರು ಸಂಚರಿಸುತ್ತಿದ್ದ ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ಹಿಂದುಗಡೆಗೆ ಬೆಂಗಾವಲು ವಾಹನ ಢಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನ ಬೂಟ್ ಭಾಗ ಹಾಗೂ ಕ್ರಾಶ್ ಗಾರ್ಡ್ ಸಂಪೂರ್ಣವಾಗಿಯೂ ನಜ್ಜುಗುಜ್ಜಾಗಿತ್ತು.

ಈ ಎಲ್ಲ ಘಟನೆಗಳು ಇನ್ನಷ್ಟು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು, ಇನ್ನು ಮುಂದೆ ಅಂಬಾಸಿಡರ್ ಬಿಡಿಭಾಗಗಳು ಸಿಗಬಹುದೇ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕೆಲವು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದಲ್ಲಿರುವ ಉತ್ತರಪಾರಾ ಘಟಕದಲ್ಲಿನ ತನ್ನ ಐಕಾನಿಕ್ ಅಂಬಾಸಿಡರ್ ಉತ್ಪಾದನೆಯನ್ನು ಹಿಂದೂಸ್ತಾನ್ ಮೋಟಾರ್ಸ್ ಸ್ಥಗತಿಗೊಳಿಸಿತ್ತು.

Hindustan Ambassador

ದೇಶದ ರಸ್ತೆಗಳಲ್ಲಿ ಈಗಲೂ ಟ್ಯಾಕ್ಸಿ, ವಿಐಪಿ ಹಾಗೂ ವೈಯಕ್ತಿಕ ಕಾರುಗಳ ರೂಪದಲ್ಲಿ ಅಂಬಾಸಿಡರ್ ಇನ್ನು ಓಡಾಡುತ್ತಿವೆ. ನಮ್ಮ ಸಂಶಯಗಳಿಗೆ ಉತ್ತರ ಸಿಗುವ ನಿಟ್ಟಿನಲ್ಲಿ ಕೋಲ್ಕತ್ತಾದ ಹಿಂದೂಸ್ತಾನ್ ಡೀಲರನ್ನು ಸಂಪರ್ಕಿಸಿದಾಗ, ಅಂಬಾಸಿಡರ್ ಬಿಡಿಭಾಗ ಪಡೆಯುವುದು ಸಮಸ್ಯೆಯೇನಲ್ಲ ಎಂಬ ಮಾಹಿತಿ ದೊರಕಿದೆ.

ಕಳೆದ 20 ವರ್ಷಗಳೆಡೆ ಅಂಬಾಸಿಡರ್ ಬಿಡಿಭಾಗಗಳನ್ನು ಕೇವಲ ಹಿಂದೂಸ್ತಾನ್ ಮೋಟಾರ್ಸ್ ಮಾತ್ರವಲ್ಲದೆ ಇನ್ನಿತರ ಹಲವಾರು ಮೂರನೇ ಸಂಸ್ಥೆಗಳು ಸಹ ಒದಗಿಸುತ್ತಿದೆ. ಇದು ದರ ಕಡಿಮೆ ಮಾಡುವಲ್ಲಿ ಸಹಕಾರಿಯೆನಿಸಿದೆ. ಹಾಗಾಗಿ ಸದ್ಯಕ್ಕಂತೂ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಕಾಣಿಸುವುದಿಲ್ಲ.

More from DriveSpark

Article Published On: Friday, June 6, 2014, 11:11 [IST]
English summary
Yesterday (June 4th), RSS chief Mohan Bhagwat was involved in a minor accident in which his security escort vehicle rear ended his Hindustan Ambassador.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+