240 ನಿರ್ವಾಹಕ ಸ್ಟಾಫ್‌ಗಳಿಗೆ ಹಿಂದೂಸ್ತಾನ್ ಕೊಕ್

By Nagaraja

ಐಕಾನಿಕ್ ಅಂಬಾಸಿಡರ್ ನಿರ್ಮಾಣ ಸ್ಥಗಿತಗೊಳಿಸಿರುವ ಬೆನ್ನಲ್ಲೇ ಅದರ ದುಷ್ಪರಿಣಾಮಗಳು ಒಂದೊಂದಾಗಿ ಹೊರಬೀಳುತ್ತಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ 240ರಷ್ಟು ನಿರ್ವಾಹಕ ಸ್ಟಾಫ್ಟ್‌ಗಳಿಗೆ ಹಿಂದೂಸ್ತಾನ್ ಮೋಟಾರ್ಸ್ ಕೊಕ್ ನೀಡಿದೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಉತ್ತರಪಾರಾ ಘಟಕದಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿನ ಅಂಬಾಸಿಡರ್ ನಿರ್ಮಾಣವನ್ನು ಸಂಸ್ಥೆಯು ಸ್ಥಗಿತಗೊಳಿಸಿತ್ತು. ಇದರ ಬೆನ್ನಲ್ಲೇ ಕಾರ್ಮಿಕರ ನಡುವೆ ಅತಂತ್ರದ ಪರಿಸ್ಥಿತಿ ನಿರ್ಮಾಣವಾಗಿತ್ತು.

ambassador

ಒಟ್ಟಾರೆಯಾಗಿ ಅಂಬಾಸಿಡರ್ ನಿರ್ಮಾಣ ನಿಲುಗಡೆಯೊಂದಿಗೆ ಸಂಸ್ಥೆಯ ಕಾರ್ಯ ನಿರ್ವಾಹಣೆ ಬಹುತೇಕ ಸ್ಥಗಿತಗೊಂಡಂತಾಗಿದೆ. ಹಾಗಿದ್ದರೂ ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲವು ಸ್ಟಾಫ್‌ಗಳನ್ನು ಉಳಿಸಿಕೊಳ್ಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ವಕ್ತಾರರೊಬ್ಬರು, ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ನಿರ್ವಾಹಕ ವಿಭಾಗದಲ್ಲಿ ಪರಿಷ್ಕರಣೆ ತರಲಾಗುತ್ತಿದ್ದು, ಆದರೆ ನಿರಂತರ ಕಾರ್ಯಾಚರಣೆಗಾಗಿ ಸ್ಟಾಫ್‌ಗಳನ್ನು ಉಳಿಸಿಕೊಳ್ಳುವುದು ಕಠಿಣವೆನಿಸಿದೆ ಎಂದಿದ್ದಾರೆ.

ಹಾಗಿದ್ದರೂ ಅಂಬಿ ಅಭಿಮಾನಿಗಳು ಮಾತ್ರ ಆಶಾವಾದಿಗಳಾಗಿ ಉಳಿದಿದ್ದು, ಯಾರಾದರೂ ಹೂಡಿಕೆದಾರರು ಮುಂದೆ ಬಂದು ಮುಳುಗು ದೋಣಿ ಎನಿಸಿಕೊಂಡಿರುವ ಅಂಬಾಸಿಡರ್ ಉಳಿಸಿಕೊಳ್ಳಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.

More from DriveSpark

Article Published On: Tuesday, June 10, 2014, 15:01 [IST]
English summary
It must be an unsettling time for Hindustan Motors employees at the Uttarpara plant in West Bengal. The carmaker famous for its iconic Ambassador which was recently discontinued, has ended the services of around 240 managerial staff. This was inevitable, however.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+