ಹಿಂದೂಸ್ತಾನ್ ನೌಕರರಿಗೆ ತಾತ್ಕಾಲಿಕ ವೇತನ

By Nagaraja

ಹಿಂದೂಸ್ತಾನ್ ಮೋಟಾರ್ಸ್ ಐಕಾನಿಕ್ ಅಂಬಾಸಿಡರ್ ಉತ್ಪಾದನೆ ಸ್ಥಗಿತಗೊಳಿಸುವುದರೊಂದಿಗೆ 2,500 ನೌಕಕರು ಬಾಳು ಅತಂತ್ರಗೊಂಡಿದೆ. ಈ ನಡುವೆ ಪಶ್ಚಿಮ ಬಂಗಾಳದ ಉತ್ತರಪುರಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರಿಗೆ ಸಂಸ್ಥೆಯು ಮೇ 24ರಂದು ತಾತ್ಕಾಲಿಕ ವೇತನವನ್ನು ನೀಡಿದೆ.

ಸಾಲದಿಂದ ಬಳಲುತ್ತಿರುವ ಹಿಂದೂಸ್ತಾನ್ ಮೋಟಾರ್ಸ್, ಪಶ್ಚಿಮ ಬಂಗಾಳ ಸರಕಾರದೊಂದಿಗೆ ನಡೆಸಿರುವ ಮಾತುಕತೆ ಬಳಿಕ ಇಂತಹದೊಂದು ನಿರ್ಧಾರವನ್ನು ಪ್ರಕಟಿಸಿತ್ತು. 2,500ದಷ್ಟು ನೌಕರರಿಗೆ ಹಿಂದೂಸ್ತಾನ್ ಮೋಟಾರ್ಸ್ 7,000 ವೇತನ ನೀಡಿದೆ. ಈ ಮೂಲಕ ಒಟ್ಟು 1.75 ಕೋಟಿ ರು.ಗಳ ವೇತನ ಪಾವತಿಸಿದೆ. ನಿಧಿ ಸಂಗ್ರಹಿಸಲು ಆಗಿರುವ ತೊಡಕಿನಿಂದಾಗಿ ವೇತನ ನೀಡಲು ವಿಳಂಬವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Hindustan Motors

ಇದೇ ಸಂದರ್ಭದಲ್ಲಿ ಅಂಬಾಸಿಡರ್ ಉತ್ಪಾದನೆ ಸ್ಥಗಿತಗೊಂಡಿರುವಂತೆಯೇ ಸಂಸ್ಥೆಯ ಭವಿಷ್ಯದ ಬಗ್ಗೆ ಸರಕಾರದೊಂದಿಗೆ ಚರ್ಚಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಬೇಡಿಕೆ ಗಣನೀಯವಾಗಿ ಕುಸಿದಿರುವುದರಿಂದ ಅಂಬಾಸಿಡರ್ ಉತ್ಪಾದನೆ ಸ್ಥಗಿತಗೊಳಿಸಲು ಹಿಂದೂಸ್ತಾನ್ ಮೋಟಾರ್ಸ್ ನಿರ್ಧರಿಸಿತ್ತು.

ಈ ನಡುವೆ ಸಾಲ ಸಂದಾಯವಾದ ಬಳಿಕ ಸಾಕಷ್ಟು ನಿಧಿ ಸಂಗ್ರಹಣೆಯ ಬಳಿಕ ಉತ್ಪಾದನೆ ಪುನರಾರಂಬಿಸುವ ಬಗ್ಗೆಯೂ ಸಂಸ್ಥೆಯ ಬಳಿ ಯೋಜನೆಯಿದೆ. ಆದರೆ ಅರ್ಹ ಹೂಡಿಕೆದಾರರ ಕೊರತೆಯು ಸಂಸ್ಥೆಯ ಹಿನ್ನಡೆಗೆ ಕಾರಣವಾಗುತ್ತಿದೆ.

More from DriveSpark

Article Published On: Wednesday, June 4, 2014, 14:36 [IST]
English summary
Hindustan Motors, which suspended production of its only product, the iconic Ambassador, at its Uttarpara facility on May 24, has made an interim payment to workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+