ಹೋಂಡಾ ಅಮೇಜ್ ಓವರ್‌ಟೇಕ್ ಮಾಡಿದ ಟಾಟಾ ಜೆಸ್ಟ್

Written By:

ಹೊಸ ತಂತ್ರಗಾರಿಕೆಯೊಂದಿಗೆ ಎಂಟ್ರಿ ಕೊಟ್ಟಿರುವ ಟಾಟಾ ಜೆಸ್ಟ್ ನಿಧಾನವಾಗಿ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿದೆ. ಇದರಂತೆ ಕಳೆದ ಕೆಲವು ಸಮಯಗಳಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ತನ್ನ ನಿಕಟ ಪ್ರತಿಸ್ಪರ್ಧಿ ಹೋಂಡಾ ಅಮೇಜ್ ಕಾರನ್ನು ಹಿಂದಿಕ್ಕಿದೆ.

ಅಕ್ಟೋಬರ್ ತಿಂಗಳಲ್ಲಿ ಗಮನಾರ್ಹ ಮಾರಾಟ ಸಾಧಿಸಿರುವ ಟಾಟಾ ಜೆಸ್ಟ್, ಅಮೇಜ್‌ಗಿಂತಲೂ 42 ಯುನಿಟ್‌ಗಳಷ್ಟು ಹೆಚ್ಚು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇದೇ ಅವಧಿಯಲ್ಲಿ ಅಮೇಜ್ ಒಟ್ಟು 3,482 ಯುನಿಟ್‌ಗಳ ಮಾರಾಟ ಕಂಡಿತ್ತು.

To Follow DriveSpark On Facebook, Click The Like Button
 Tata Zest

ಇದರದೊಂದಿಗೆ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಜೆಸ್ಟ್ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ವಿಭಾಗದಲ್ಲಿ ಅತ್ಯಧಿಕ ಮಾರಾಟ ದಾಖಲಿಸುತ್ತಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿಯ ಜನಪ್ರಿಯ ಸ್ವಿಫ್ಟ್ ಡಿಜೈರ್, ಅಕ್ಟೋಬರ್ ತಿಂಗಳಲ್ಲಿ 17,950 ಯುನಿಟ್‌ಗಳ ಮಾರಾಟ ದಾಖಲಿಸಿದೆ.

ಅದೇ ಹೊತ್ತಿಗೆ ಎರಡನೇ ಸ್ಥಾನದಲ್ಲಿರುವ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಹ್ಯುಂಡೈ ಎಕ್ಸ್‌ಸೆಂಟ್ 4,629 ಯುನಿಟ್ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಟಾಟಾ ಜೆಸ್ಟ್ ಲಭ್ಯವಿರುತ್ತದೆ. ಅಲ್ಲದೆ ಎಎಂಟಿ ವರ್ಷನ್ ಇತರ ಕಾರುಗಳಿಗಿಂತ ಭಿನ್ನವಾಗಿಸುತ್ತದೆ. ಇದು 4.65 ಲಕ್ಷ ರು.ಗಳಿಂದ 7 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಿದೆ.

ಮೆಟ್ಜೆಲೆರ್ ರೋಡ್‌ಟೆಕ್ ಝಡ್6 ಟ್ಯೂಬ್‌ಲೆಸ್ - ಶೇ.10ರಷ್ಟು ರಿಯಾಯಿತಿ

English summary
The Indian manufacturer managed to sell 3,524 Zest vehicles in October, 2014. On the other hand Honda was content by selling only 3,482 Amaze vehicles in October, 2014.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark