ದೇಶದಲ್ಲಿ 200ನೇ ಡೀಲರ್ ತೆರೆದುಕೊಂಡ ಹೋಂಡಾ

By Nagaraja

ಒಂದರ ಬಳಿಕ ಒಂದರಂತೆ ನಿರಂತರ ಅಂತರಾಳದಲ್ಲಿ ಅತ್ಯಾಕರ್ಷಕ ಕಾರುಗಳನ್ನು ಬಿಡುಗಡೆ ಮಾಡುತ್ತ ಸಾಗುತ್ತಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ದೇಶದಲ್ಲಿ 200ನೇ ಡೀಲರ್‌ಶಿಪ್ ತೆರೆದುಕೊಂಡಿದೆ.

ಹೋಂಡಾದ 200ನೇ ಶೋ ರೂಂ ಆಗುವ ಭಾಗ್ಯ ಸಿಕಂದರಾಬಾದ್‌ನ ಮೆಟ್ರೋ ಹೋಂಡಾಗೆ ಲಭಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹೋಂಡಾ ಸಂಸ್ಥೆಯು, ಮಾರಾಟದ ಬಳಿಕವೂ ಗ್ರಾಹಕರಿಗೆ ಗರಿಷ್ಠ ಸೇವೆ ಸಲ್ಲಿಸುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದಿದೆ.


ಹೋಂಡಾ ಅಮೇಜ್ ಮೂಲಕ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಹೋಂಡಾ ಸಂಸ್ಥೆಯು ತದಾ ಬಳಿಕ ಸಿಟಿ ಸೆಡಾನ್ ಮತ್ತು ಮೊಬಿಲಿಯೊ ಎಂಪಿವಿಗಳಂತಹ ಅತ್ಯಾಕರ್ಷಕ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಸಿಕಂದರಬಾದ್ ಶೋ ರೂಂ ಉದ್ಘಾಟನೆ ಮಾಡುತ್ತಾ ತಿಳಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಹಿರೊನೊರಿ ಕನಯಮ, ನಿಕಟ ಭವಿಷ್ಯ ವಿತರಕ ಜಾಲವನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯಿದೆ ಎಂದಿದ್ದಾರೆ.

Honda Cars

ಮುಂಬರುವ 16 ತಿಂಗಳಲ್ಲಿ ಹೊಸತಾಗಿ 100 ಡೀಲರ್ ಕೇಂದ್ರಗಳನ್ನು ತೆರೆದುಕೊಳ್ಳುವುದು ಹೋಂಡಾ ಗುರಿಯಾಗಿದೆ. ಈ ಮೂಲಕ 2016 ಮಾರ್ಚ್ ವೇಳೆಯಾಗುವ ವಿತರಕ ಜಾಲದ ಸಂಖ್ಯೆಯನ್ನು 300ಕ್ಕೆ ಏರಿಕೆಗೊಳಿಸಲಿದೆ. ಈ ಮುಖಾಂತರ 2017ರ ವೇಳೆಯಾಗುವಾಗ ವಾರ್ಷಿಕವಾಗಿ 3,00,000 ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದೆ.

Article Published On: Friday, November 14, 2014, 10:15 [IST]
English summary
Japanese automobile manufacturer Honda is well know in India for their quality products. Their most recent launch was the Mobilio, which is a family MPV. They will soon be launch new products in India in 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+