ಅಮೆರಿಕಕ್ಕೆ ಹೋಂಡಾ ಎಚ್‌ಆರ್-ವಿ ರೂಪದಲ್ಲಿ ವೆಜೆಲ್ ಪ್ರವೇಶ
ಹೋಂಡಾ ನೂತನ ಕಾಂಪಾಕ್ಟ್ ಎಸ್‌ಯುವಿ ಕಾರೊಂದನ್ನು ಅಭಿವೃದ್ಧಿಪಡಿಸಿತ್ತು. ಇದು ಜಾಝ್/ಫಿಟ್ ತಲಹದಿಯಲ್ಲಿ ರೂಪಗೊಂಡಿತ್ತು ಎಂಬುದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ವೆಜೆಲ್ ಎಂದು ಗುರುತಿಸಿಕೊಂಡಿರುವ ಈ ಮಾದರಿಯು 2013 ಡಿಸೆಂಬರ್‌ನಲ್ಲಿ ಜಪಾನ್ ಮಾರುಕಟ್ಟೆಯನ್ನು ತಲುಪಿತ್ತು.
ಪ್ರಸ್ತುತ ಮಾದರಿಯು ಪ್ರಸಕ್ತ ಸಾಲಿನಲ್ಲೇ ಜಾಗತಿಕ ಪ್ರವೇಶ ಕೂಡಾ ಪಡೆಯುತ್ತಿದೆ. ಇದರಂತೆ ಅಮೆರಿಕ ಮಾರುಕಟ್ಟೆಯನ್ನು ಮೊದಲು ತಲುಪಲಿದೆ. ಆದರೆ ಅಮೆರಿಕದಲ್ಲಿ ವೆಜೆಲ್ ಎಂದು ಗುರುತಿಸಿಕೊಳ್ಳುವುದಿಲ್ಲ ಬದಲಾಗಿ ಎಚ್‌ಆರ್-ವಿ ಎಂದು ಅರಿಯಲ್ಪಡಲಿದೆ. ಇದು ಹಳೆಯ ಹೈ ರೈಡರ್ ವಾಹನವನ್ನು ಪುನರುಜ್ಜೀವನಗೊಳಿಸಲಿದೆ.

ಈಗಷ್ಟೇ ನೂತನ ಮಾದರಿಯನ್ನು ಅಮೆರಿಕ ಡೀಲರ್‌ನಲ್ಲಿ ಪ್ರದರ್ಶಿಸಿರುವ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ.
ನಿಕಟ ಭವಿಷ್ಯದಲ್ಲೇ ಆಸ್ಟ್ರೇಲಿಯಾ ಹಾಗೂ ಯುರೋಪ್ ಮಾರುಕಟ್ಟೆಯನ್ನು ಹೋಂಡಾ ವೆಜೆಲ್ ತಲುಪಲಿದೆ. ಆದರೆ ಭಾರತಕ್ಕೆ ಪ್ರವೇಶ ಇಲ್ಲ ಎಂಬುದನ್ನು ಹೋಂಡಾ ಸ್ಪಷ್ಟಪಡಿಸಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








