ಹೋಂಡಾಗೆ ಒಂದು ಸಾವಿರ ಕಾರ್ಮಿಕರು ಬೇಕಾಗಿದ್ದಾರೆ!

By Nagaraja

ಜಪಾನ್‌ನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮೆಟೆಡ್ (ಎಚ್‌ಸಿಐಎಲ್), ಭಾರತದಲ್ಲಿ 1,000ದಷ್ಟು ಕಾರ್ಮಿಕರ ಹುಡುಕಾಟದಲ್ಲಿದೆ. ಈ ಮೂಲಕ ತನ್ನ ನಿರ್ಮಾಣ ಘಟಕದಲ್ಲಿ ಎರಡನೇ ಸರದಿ ಕೆಲಸ ಆರಂಭಿಸುವುದು ಸಂಸ್ಥೆಯ ಗುರಿಯಾಗಿದೆ.

ಪ್ರಸಕ್ತ ಆರ್ಥಿಕ ಸಾಲಿನೊಳಗೆ ಎಲ್ಲ ನೌಕರರನ್ನು ನೇಮಕಗೊಳಿಸಲಾಗುವುದು. ಹಾಗೆಯೇ 2014 ಹಾಗೂ 2015ರಲ್ಲಿ 2 ಲಕ್ಷಗಳಷ್ಟು ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 50ರಷ್ಟು ಮಾರಾಟ ವೃದ್ಧಿಸುವ ಯೋಜನೆ ಹೊಂದಿದೆ.

honda

ಪ್ರಸ್ತುತ ತಪುಕರ ಹಾಗೂ ಗ್ರೇಟರ್ ನೋಯ್ಡಾದಲ್ಲಿ ಹೋಂಡಾ ಘಟಕಗಳಿವೆ. ಈ ಎರಡು ಘಟಕಗಳಲ್ಲಾಗಿ ಸರಿ ಸುಮಾರು 9,000ದಷ್ಟು ನೌಕರರಿದ್ದಾರೆ. ಪ್ರಸ್ತುತ ಎರಡು ಶಿಫ್ಟ್‌ಗಳಾಗಿ ವಾರ್ಷಿಕವಾಗಿ 1.2 ವಾಹನಗಳನ್ನು ಉತ್ಪಾದಿಸುತ್ತದೆ. ಇನ್ನು 2016-17ರ ವೇಳೆಗೆ ಮೂರು ಲಕ್ಷ ಯುನಿಟ್‌ಗಳ ನಿರ್ಮಾಣ ಗುರಿ ಹೊಂದಿರುವ ಸಂಸ್ಥೆಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಮಾರ್ಕೆಟಿಂಗ್ ಆಂಡ್ ಸೇಲ್ಸ್ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೆನ್, ತಪುಕರ ಘಟಕದಲ್ಲಿ ಎರಡನೇ ಸರದಿಯಲ್ಲಿ ವಾಹನಗಳನ್ನು ನಿರ್ಮಿಸುವುದಕ್ಕಾಗಿ 1,000ದಷ್ಟು ನೌಕರರ ಅಗತ್ಯವಿದೆ. ಪ್ರಸಕ್ತ ಸಾಲಿನಲ್ಲೇ ಈ ಗುರಿ ಮುಟ್ಟಲಿದ್ದೇವೆ ಎಂದಿದ್ದಾರೆ.

Article Published On: Monday, June 9, 2014, 15:05 [IST]
English summary
Honda the largest Japanese automobile manufacturer will be hunting 1,000 employees in India. The Japanese manufacturer will be looking for new employees as it will be beginning a second production shift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+