2014 ಅತ್ಯಂತ ವಿಶ್ವಾಸಾರ್ಹ ಕಾರು - ಹೋಂಡಾ ಜಾಝ್
'2014 ಅತ್ಯಂತ ವಿಶ್ವಾಸಾರ್ಹ ಕಾರು' ಎಂಬ ಗೌರವಕ್ಕೆ ಹೋಂಡಾ ಜಾಝ್ ಪಾತ್ರವಾಗಿದೆ. ಆಟೋ ಎಕ್ಸ್‌ಪ್ರೆಸ್ ಡ್ರೈವರ್ ಪವರ್ ಸರ್ವೆ ಮಾಡಿರುವ ಅಧ್ಯಯನದಲ್ಲಿ ಅತ್ಯಂತ ವಿಶ್ವಾಸಾರ್ಹ ಕಾರುಗಳ ಪೈಕಿ ಶೇಕಡಾ 98ರಷ್ಟು ಅಂಕ ಸಂಪಾದಿಸುವಲ್ಲಿ ಹೋಂಡಾ ಜಾಝ್ ಯಶಸ್ವಿಯಾಗಿದೆ.
50,000ಕ್ಕೂ ಹೆಚ್ಚು ಕಾರು ಮಾಲಿಕರಲ್ಲಿ ನಡೆಸಿರುವ ಅಧ್ಯಯನದ ಬಳಿಕ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶ್ವಾಸಾರ್ಹತೆ, ನಿರ್ವಹಣೆ, ರಸ್ತೆ ಹ್ಯಾಂಡ್ಲಿಂಗ್ ಹಾಗೂ ಪ್ರಾಯೋಗಿಕ ಸ್ಥಿತಿಗತಿಗಳಂತಹ ಮಾನದಂಡಗಳ ಆಧಾರದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹೋಂಡಾ ಯುಕೆ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಿಲಿಪ್ ಕ್ರಾಸ್‌ಮ್ಯಾನ್, ಇಂದೊಂದು ದೊಡ್ಡ ಸುದ್ದಿಯಾಗಿದ್ದು, ಹೋಂಡಾ ಜಾಝಅ ಬ್ರಿಟನ್‌ನಲ್ಲಿ ಉತ್ಪಾದನೆಯಾಗುತ್ತಿರುವ ಅತ್ಯುತ್ತಮ ಕಾರಾಗಿದೆ ಎಂದಿದ್ದಾರೆ.
ಅಂದ ಹಾಗೆ ಹೋಂಡಾ ಜಾಝ್ ಎರಡು ಪೆಟ್ರೋಲ್ ಐ-ವಿಟೆಕ್ (i-VTEC) ಎಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತಿದೆ. ಅವುಗಳೆಂದರೆ 1.2 ಲೀಟರ್ ಅಥವಾ 1.4 ಲೀಟರ್. ಇವೆರಡು ಗರಿಷ್ಠ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.
ಅದೇ ಹೊತ್ತಿಗೆ 2014 ಅತ್ಯಂತ ವಿಶ್ವಾಸಾರ್ಹ ಕಾರುಗಳ ಪಟ್ಟಿಯಲ್ಲಿ ಕಿಯಾ ರಿಯೊ ಮತ್ತು ಫೋಕ್ಸ್‌ವ್ಯಾಗನ್ ಅಪ್, ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಆಲಂಕರಿಸಿವೆ.


Click it and Unblock the Notifications