ಭಾರತಕ್ಕಿಲ್ಲ ಹೋಂಡಾ ಮೊಬಿಲಿಯೊ ಆಟೋಮ್ಯಾಟಿಕ್ ?
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಬಹುನಿರೀಕ್ಷಿತ ಮೊಬಿಲಿಯೊ ಎಂಪಿವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸನ್ನದ್ಧವಾಗಿದೆ. ಆದರೆ ಬೇಸರದ ಸಂಗತಿಯೊಂದರಲ್ಲಿ ಹೋಂಡಾ ಮೊಬಿಲಿಯೊ ಆಟೋಮ್ಯಾಟಿಕ್ ವರ್ಷನ್ ಭಾರತ ಮಾರುಕಟ್ಟೆ ಪ್ರವೇಶಿಸುವುದು ಕಠಿಣವೆನಿಸಿದೆ.
ಗ್ರೇಟರ್ ನೋಯ್ಢಾದಲ್ಲಿರುವ ತನ್ನ ಘಟಕದಲ್ಲಿ ಮೊಬಿಲಿಯೊ ಎಂಪಿವಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವ ಹೋಂಡಾ, ಮುಂಬರುವ ಜುಲೈ ಅಥವಾ ಸೆಪ್ಟೆಂಬರ್ ತಿಂಗಳೊಳಗೆ ಮೊಬಿಲಿಯೊ ಭಾರತದಲ್ಲಿ ಲಾಂಚ್ ಮಾಡಲಿದೆ. ಲಾಂಚ್ ದಿನಾಂಕ ಇನ್ನು ಅಧಿಕೃತಗೊಂಡಿಲ್ಲ.

ಅಮೇಜ್ ಹಾಗೂ ಸಿಟಿ ತರಹನೇ ಶೇಕಡಾ 90ರಷ್ಟು ಉತ್ಪಾದನೆಯು ಸ್ಥಳೀಯವಾಗಿ ನಡೆಯಲಿದೆ. ಇದು ಸಂಸ್ಥೆಗೆ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.
ಏಳು ಸೀಟುಗಳ ಈ ಎಂಪಿವಿ ಪ್ರಮುಖವಾಗಿಯೂ ಮಾರುತಿ ಸುಜುಕಿ ಎರ್ಟಿಗಾಗೆ ಪ್ರತಿಸ್ಪರ್ಧಿಯಾಗಿರಲಿದೆ. ಹಾಗಿದ್ದರೂ ಸರಿಯಾದ ಆಯಾಮದ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಆದರೂ ಇನ್ನೋವಾಗಿಂತಲೂ ಸಣ್ಣದಾಗಿರಲಿದೆ ಎಂಬುದು ತಿಳಿದು ಬಂದಿದೆ.
ಸಿಟಿ ಜೊತೆ ಎಂಜಿನ್ ಹಂಚಿಕೊಳ್ಳಲಿರುವ ಮೊಬಿಲಿಯೊ, ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಆರ್ಥಿಕ ದೃಷ್ಟಿಕೋನದಲ್ಲಿ ಆಟೋಮ್ಯಾಟಿಕ್ ವೆರಿಯಂಟ್ ಪರಿಚಯಿಸುವುದು ಕಷ್ಟಸಾಧ್ಯವಾಗಿದೆ ಎಂದು ಇತ್ತೀಚೆಗಷ್ಟೇ ಡ್ರೈವ್‌ಸ್ಪಾರ್ಕ್ ಸಂದರ್ಶನದಲ್ಲಿ ಹೋಂಡಾ ಕಾರ್ಸ್ ಇಂಡಿಯಾ, ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷ ಜಾನ್ವೇಶ್ವರ ಸೆನ್ ತಿಳಿಸಿದ್ದಾರೆ.


Click it and Unblock the Notifications








