ಹೋಂಡಾ ಸಿಬಿಎಫ್ ಸ್ಟನ್ನರ್ ಓಟ ನಿಲುಗಡೆ
ಭಾರತೀಯ ಮಾರುಕಟ್ಟೆಗೆ ಬಹುತೇಕ ಎಲ್ಲ ವಿಭಾಗದಲ್ಲೂ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿರುವ ಜಪಾನ್ ಮೂಲದ ಹೋಂಡಾ ಟು ವೀಲರ್ಸ್ ಸಂಸ್ಥೆಯು ಪ್ರಯಾಣಿಕ ವಿಭಾಗ ಸೇರಿದಂತೆ ಪ್ರೀಮಿಯಂ ಮಾರುಕಟ್ಟೆಯಲ್ಲೂ ತನ್ನದೇ ಆದ ಸ್ಥಾನಮಾನ ಗಟ್ಟಿಪಡಿಸಿದೆ.
ಈ ನಡುವೆ ಕೆಲವು ವರ್ಷಗಳ ಹಿಂದೆಯಷ್ಟೇ ಪರಿಚಯಿಸಿದ್ದ ಸೆಮಿ ಫೇರಿಂಗ್ ಭೈಕ್ ಆಗಿರುವ ಸಿಬಿಎಫ್ ಸ್ಟನ್ನರ್ ಉತ್ಪಾದನೆ ಸ್ಥಗಿತಗೊಳಿಸಲು ಸಂಸ್ಥೆ ನಿರ್ಧರಿಸಿದೆ.

ಬಿಡುಗಡೆ ವೇಳೆ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿದ್ದ ಸ್ಟನ್ನರ್ ನಿಧಾನವಾಗಿ ತನ್ನ ಆವೇಗ ಕಳೆದುಕೊಂಡಿತ್ತು. ಇದೇ ಕಾರಣಕ್ಕಾಗಿ ಸ್ಟನ್ನರ್ ಓಟ ನಿಲುಗಡೆಗೊಳಿಸಲು ಸಂಸ್ಥೆ ನಿರ್ಧರಿಸಿದೆ.
125 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಹೋಂಡಾ ಸ್ಟನ್ನರ್ 11 ಅಶ್ವಶಕ್ತಿ (11 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.
ಹಾಗಿದ್ದರೂ ಸದ್ಯಕ್ಕೆ ಹೋಂಡಾ ವೆಬ್‌ಸೈಟ್‌ನಿಂದ ಸ್ಟನ್ನರ್‌ಗೆ ಕತ್ತರಿ ಪ್ರಯೋಗವಾಗಿಲ್ಲ. ಸದ್ಯ ಸ್ಟೋಕ್‌ನಲ್ಲಿರುವ ಯುನಿಟ್‌ಗಳು ಮಾರಾಟವಾದ ಬಳಿಕವಷ್ಟೇ ಇಂತಹದೊಂದು ಪ್ರಕ್ರಿಯೆ ಕಂಡುಬರುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಕಳಪೆ ಬೇಡಿಕೆಯ ಹಿನ್ನಲೆಯಲ್ಲಿ ಸಿಬಿ ಡಾಜ್ಲರ್ ಉತ್ಪಾದನೆಯನ್ನು ಸಹ ಹೋಂಡಾ ಸ್ಥಗಿತಗೊಳಿಸಿತ್ತು.


Click it and Unblock the Notifications








