ಹೋಂಡಾ ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ
ನಿಸ್ಸಂಶವಾಗಿಯೂ ದೇಶೀಯ ವಾಹನ ಮಾರುಕಟ್ಟೆಯಲ್ಲಿ 'ಹ್ಯಾಟ್ರಿಕ್' ವಿಜಯ ದಾಖಲಿಸಿರುವ ಜಪಾನ್ ಮೂಲದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
ಅಮೇಜ್ ಕಾಂಪಾಕ್ಟ್ ಸೆಡಾನ್ ಬಳಿಕ ಸಿಟಿ ಸೆಡಾನ್ ತದಾನಂತರ ಮೊಬಿಲಿಯೊ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಿದ್ದ ಹೋಂಡಾ ಹ್ಯಾಟ್ರಿಕ್ ಗೆಲುವು ಆಚರಿಸಿಕೊಂಡಿದೆ. ಇದು ಮಾರಾಟದಲ್ಲೂ ದಾಖಲಾಗುವಲ್ಲಿ ಯಶಸ್ವಿಯಾಗಿದೆ.
2014 ನವೆಂಬರ್ ತಿಂಗಳ ಮಾರಾಟದಲ್ಲಿ ಒಟ್ಟು 15,263 ಯುನಿಟ್‌ಗಳ ಮಾರಾಟ ಕಂಡಿರುವ ಹೋಂಡಾ ಸಂಸ್ಥೆಯು ಶೇಕಡಾ 64ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 9,332 ಯುನಿಟ್‌ಗಳ ಮಾರಾಟವನ್ನಷ್ಟೇ ಕಂಡುಕೊಂಡಿತ್ತು. ಅಷ್ಟೇ ಅಲ್ಲದೆ 2014 ಎಪ್ರಿಲ್‌ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಸಂಸ್ಥೆಯು ಶೇಕಡಾ 46ರಷ್ಟು ಏರಿಕೆ ದಾಖಲಿಸಿದೆ.
ಈ ಅವಧಿಯಲ್ಲಿ ಸಂಸ್ಥೆಯು ಒಟ್ಟು 1,16,705 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷ ಇದು 80,163 ಯುನಿಟ್‌ಗಳಾಗಿತ್ತು.
ಈ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿರುವ ಹೋಂಡಾ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಅಧ್ಯಕ್ಷರಾಗಿರುವ ಜ್ಞಾನ್ವೇಶ್ವರ ಸೆನ್, ದೇಶೀಯ ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಮ್ಮ ಆಕ್ರಮಣಕಾರಿ ಯೋಜನೆಯನ್ನು ಜಾರಿಗೊಳಿಸುವ ಇರಾದೆಯಲ್ಲಿದ್ದು, ಈಗಾಗಲೇ 200ನೇ ವಿತರಕ ಜಾಲ ತೆರೆದುಕೊಳ್ಳಲಾಗಿದೆ ಎಂದಿದ್ದಾರೆ. ಅದೇ ರೀತಿ ತಕಪುರದಲ್ಲಿ ಎರಡನೇ ಶಿಫ್ಟ್ ಕೆಲಸ ಆರಂಭಿಸಿರುವುದು ನಿರ್ಮಾಣ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.
ಸಂಸ್ಥೆಯು 2014 ನವೆಂಬರ್ ಅವಧಿಯಲ್ಲಿ 890 ಯುನಿಟ್‌ಗಳ ರಫ್ತು ಕೂಡಾ ಕಂಡಿದೆ.

ಹೋಂಡಾ ಮಾರಾಟ ಅಂಕಿಅಂಶಗಳು ಇಂತಿದೆ (2014 ನವೆಂಬರ್)
ದೇಶೀಯ ಮಾರಾಟ (ಯುನಿಟ್‌ಗಳಲ್ಲಿ)
- ಬ್ರಿಯೊ - 1,050
- ಅಮೇಜ್ - 3,310
- ಮೊಬಿಲಿಯೊ - 3,589
- ಸಿಟಿ - 7,252
- ಸಿಆರ್-ವಿ - 62
ಒಟ್ಟು ದೇಶೀಯ ಮಾರಾಟ - 15,263
- ರಫ್ತು - 890
ಒಟ್ಟು ಮಾರಾಟ - 16,153 (ದೇಶೀಯ ಹಾಗೂ ರಫ್ತು ಸೇರಿ)
ಮೆಟ್ಜೆಲೆರ್ ರೋಡ್ ಟೆಕ್ ಝಡ್6 ಟ್ಯೂಬ್ ಲೆಸ್ - ಶೇ. 10ರಷ್ಟು ರಿಯಾಯಿತಿ


Click it and Unblock the Notifications