ಗುಜರಾತ್‌ನಲ್ಲಿ ಹೊಸ ಘಟಕ ತೆರೆಯಲಿರುವ ಹೋಂಡಾ
ಗುಜರಾತ್ ಸರಕಾರವನ್ನು ಸಂಪರ್ಕಿಸಿರುವ ಜಪಾನ್‌ನ ಆಟೋ ದೈತ್ಯ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು, ಅಹಮದಾಬಾದ್‌ನ ವಿಠಲಪುರ ಗ್ರಾಮದಲ್ಲಿ ನೂತನ ಘಟಕ ತೆರೆಯುವ ಇರಾದೆಯನ್ನು ವ್ಯಕ್ತಪಡಿಸಿದೆ.
ವರದಿಗಳ ಪ್ರಕಾರ ಹೋಂಡಾ ಹೊಸ ಘಟಕದಲ್ಲಿ 1,000 ಕೋಟಿ ರು.ಗಳ ಭರ್ಜರಿ ಹೂಡಿಕೆ ನಡೆಸುವ ಯೋಜನೆ ಹೊಂದಲಾಗಿದೆ.

ಪ್ರಸ್ತುತ ಗುಜರಾತ್ ರಾಜ್ಯ ಸಂಪುಟದ ಮೇಜಿನಲ್ಲಿರುವ ಹೊಸ ಘಟಕದ ಪ್ರಸ್ತಾವನೆಯು ಸದ್ಯದಲ್ಲೇ ಅನುಮೋದನೆ ಪಡೆಯಲಿದೆ ಎಂಬ ಬಗ್ಗೆ ಸೂಚನೆ ಲಭಿಸಿದೆ.
ದೇಶದ ಪ್ರಮುಖ ಸಂಸ್ಥೆಗಳು ಗುಜರಾತ್‌ನಲ್ಲಿ ಘಟಕ ತೆರೆದುಕೊಂಡಿದೆ. ಗುಜರಾತ್ ರಾಜ್ಯ ಸರಕಾರದ ಬೆಂಬಲದಿಂದಾಗಿ ಇದು ಸಾಧ್ಯವಾಗಿದೆ.
ಅಚ್ಚರಿಯೆಂಬಂತೆ ಮೂರು ತಿಂಗಳ ಹಿಂದೆಯಷ್ಟೇ ಹೋಂಹಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್ (ಎಚ್‌ಎಸ್‌ಎಂಐ) ಸಂಸ್ಥೆಯು ಇದೇ ಜಾಗದಲ್ಲಿ (110 ಕೀ.ಮೀ. ದೂರದಲ್ಲಿ) ದೇಶದ ಅತಿ ದೊಡ್ಡ ಸ್ಕೂಟರ್ ಘಟಕ ತೆರೆಯುವ ಇರಾದೆ ಹೊಂದಿತ್ತು.
ಇದು ಗುಜರಾತ್ ರಾಜ್ಯ ಸರಕಾರದ 'ಮೆಗಾ ಕೈಗಾರಿಕಾ ನೀತಿಯಲ್ಲಿ' ಗುರುತಿಸಿಕೊಳ್ಳಲಿದೆ. ಅಲ್ಲದೆ ಹೋಂಡಾ ಎರಡನೇ ಘಟಕ ಎನಿಸಿಕೊಳ್ಳಲಿದ್ದು, ವಿಠಲಪುರ ಜಿಲ್ಲೆಯಲ್ಲೇ ಹೋಂಡಾ ಮೋಟಾರ್ ಸೈಕಲ್ ಸ್ಕೂಟರ್ ಇಂಡಿಯಾ ಸಂಸ್ಥೆಯು 1,100 ಕೋಟಿ ರು. ಹೂಡಿಕೆ ಮಾಡುತ್ತಿದೆ.


Click it and Unblock the Notifications








