ಹೊಸ ಹೈಬ್ರಿಡ್ ಮಾಡೆಲ್‌ನೊಂದಿಗೆ ಟೊಯೊಟಾಗೆ ಹುಂಡೈ ಸವಾಲು
ಟೊಯೊಟಾ ಪ್ರಯಸ್ ಹೈಬ್ರಿಡ್ ಮಾಡೆಲ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಪ್ರಯಸ್‌ಗೆ ವಿರುದ್ಧವಾಗಿ ಹೊಸತಾದ ಮಿಶ್ರತಳಿ ವಾಹನವನ್ನು ಸಿದ್ಧಪಡಿಸುತ್ತಿದೆ.
ಪೆಟ್ರೋಲ್ ಇಂಧನ ಜೊತೆಗೆ ಎಲೆಕ್ಟ್ರಿಕ್ ಮೋಟಾರು ತಂತ್ರಜ್ಞಾನವನ್ನು ಹೊಂದರಲಿರುವ ಹ್ಯುಂಡೈ ಹೈಬ್ರಿಡ್ ಕಾರು ಸಂಸ್ಥೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ಮೊದಲ ಮಿಶ್ರತಳಿ ವಾಹನ ಎನಿಸಿಕೊಳ್ಳಲಿದೆ.

ಹೆಚ್ಚು ಪರಿಸರ ಸ್ನೇಹಿ ವಾಹನ ನಿರ್ಮಾಣ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಈ ಮೂಲಕ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಗೆ ಸವಾಲೆಸಯಲಿದೆ.
ಬಲ್ಲ ಮೂಲಗಳ ಪ್ರಕಾರ ಹ್ಯುಂಡೈ ಬ್ಯಾಟರಿ ನಿಯಂತ್ರಿತ ಕಾರು 2016ರಲ್ಲಿ ರಸ್ತೆ ಪ್ರವೇಶಿಸಲಿದೆ. ಹಾಗಿದ್ದರೂ ಕಾರಿನ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.


Click it and Unblock the Notifications